ತಾಳಿಕೋಟೆ ಇಕ್ರಾ ಉರ್ದು ಶಾಲೆ ವಾರ್ಷಿಕೋತ್ಸವ ಸಮಾರಂಭವನ್ನು ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಉದ್ಘಾಟಿಸಿದರು. ಸಾಹೇಬಗೌಡ ಬಿರಾದಾರ, ಮಹ್ಮದಸಾಬ ಕೆಂಭಾವಿ ಇತರರಿದ್ದರು. 
ಜಿಲ್ಲೆ

‘ಜ್ಞಾನ’ ಯಾರೂ ಕದಿಯದ ಸಂಪತ್ತು

ದತ್ತಾತ್ರೇಯ ಪಿ ಕುಲಕರ್ಣಿ

ತಾಳಿಕೋಟೆ: ಎಲ್ಲ ಸಂಪತ್ತನ್ನು ಕದಿಯಬಹುದು. ಆದರೆ ಜ್ಞಾನ ಸಂಪತ್ತನ್ನು ಯಾರಿಂದಲೂ ಕದಿಯಲು ಸಾಧ್ಯವಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಹೇಳಿದರು.

ಪಟ್ಟಣದ ಇಕ್ರಾ ಉರ್ದು ಪ್ರಾಥಮಿಕ, ಪ್ರೌಢ ಶಾಲೆ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಪಾಲಕರು ಮನೆಯಲ್ಲಿ ಮಕ್ಕಳಿಗೆ ಓದಲು ಸ್ಫೂರ್ತಿ ನೀಡಬೇಕು. ಶಿಕ್ಷಣದ ಜತೆ ಉತ್ತಮ ಸಂಸ್ಕಾರ ನೀಡಬೇಕು ಎಂದು ಸಲಹೆ ನೀಡಿದರು.

ಸಾಹಿತಿ ಸಾಹೇಬಗೌಡ ಬಿರಾದಾರ ಮಾತನಾಡಿದರು. ಮಹ್ಮದಸಾಬ ಕೆಂಭಾವಿ ಅಧ್ಯಕ್ಷತೆ ವಹಿಸಿದ್ದರು.

ಅಲ್ಲಾಬಕ್ಷ ಬಿಜಾಪುರ, ಅಬ್ದುಲ ರಜಾಕ ಕೆಂಭಾವಿ, ಕಸಾಪ ಅಧ್ಯಕ್ಷ ರೇವಣಸಿದ್ದಪ್ಪ ಕೊಪ್ಪದ, ಪುರಸಭೆ ಅಧ್ಯಕ್ಷೆ ಜುಬೇದಾ ಜಮಾದಾರ, ಮಾಸುಮಸಾಬ ಕೆಂಬಾವಿ, ಚಾಂದಹುಸೇನ ಖಾಂಜಾದೆ, ಕಾಶಿಮ ಅಲಿಮನ್ಸೂರ, ಸರರಾಜ ಮಿರ್ದೆ, ಮಹ್ಮದ ಶಫೀಕ ಇನಾಮದಾರ, ಮೈನುದ್ದೀನ ಸಿಪಾಯಿ, ಜೈಭೀಮ ಮುತ್ತಗಿ, ಮಾಧುರಿ ಹಜೇರಿ, ಅಲ್ಲಾಬಕ್ಷ ಲಾಹೋರಿ, ಮಹಿಬೂಬಸಾಬ ಬಸ್ತಿ, ಇಮಾಮಸಾಬ ಚೌದ್ರಿ, ಶಿಕ್ಷಕರಾದ ಎಂ.ಎಂ. ಕೆಂಭಾವಿ, ಜೆ.ಎಚ್. ಮುಲ್ಲಾ, ಎಂ.ಎ. ಕಟಗಿ, ಎಂ.ಎ. ಪಟ್ಟೆವಾಲೆ, ಎನ್.ಎಂ. ಬಲಶೇಟಿಹಾಳ, ಬಿ.ಎಲ್. ಬಿರಾದಾರ ಉಪಸ್ಥಿತರಿದ್ದರು.

ಮುಖ್ಯ ಅಧ್ಯಾಪಕ ಜಾವೀದ ಕೆಂಭಾವಿ ಪ್ರಾಸ್ತಾವಿಕ ಮಾತನಾಡಿದರು. ಸೈಯದ ಬೇಪಾರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.