ಜಿಲ್ಲೆ

ತಂತ್ರಜ್ಞಾನ ಬಳಕೆಯಿಂದ ಜ್ಞಾನ ವೃದ್ಧಿ

ವಿಠ್ಠಲ ಹಣಮಂತ ಬಾಳೇಕುಂದ್ರಿ

ಬೆಳಗಾವಿ: ಜಗತ್ತು ತಾಂತ್ರಿಕವಾಗಿ ಬದಲಾಗುತ್ತಿದೆ. ಅದರಂತೆ ವಿದ್ಯಾರ್ಥಿಗಳು ತಂತ್ರಜ್ಞಾನ ಬಳಕೆಯಿಂದ ಜ್ಞಾನ ಹೆಚ್ಚಿಸಿಕೊಳ್ಳಬೇಕು ಎಂದು ನಾಗನೂರ ರುದ್ರಾ ಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಹೇಳಿದರು.

ನಗರದ ಎಸ್​.ಜಿ.ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗುರುವಂದನೆ ಕಾರ್ಯಕ್ರಮ ಹಾಗೂ ರಾಷ್ಟ್ರೀಯ ಗ್ರಂಥಾಲಯ ದಿನಾಚರಣೆಯಲ್ಲಿ ಮಾತನಾಡಿದರು.

ಡಾ.ಕಿರಣಕುಮಾರ ಸವಣೂರ ಮಾತನಾಡಿದರು. ಸಂಸ್ಥೆಯ ಚೇರ್ಮನ್​ ಎ್​.ವಿ.ಮಾನ್ವಿ, ಪ್ರಾಂಶುಪಾಲ ಡಾ.ಬಿ.ಆರ್​.ಪಟಗುಂದಿ, ಗ್ರಂಥಪಾಲಕರಾದ ನಳಿನಿ ಅಂಬಲಿ,ಯಲ್ಲಪ್ಪ ಮಡಿವಾಳರ, ವಿಠ್ಠಲ ಕುರುಬರ, ಶಶಿಕಲಾ ಹೊಸಮಠ ಇತರರಿದ್ದರು.