ವಿಜಯಪುರದ ಬಿಎಲ್‌ಡಿಇ ಸಂಸ್ಥೆಯ ವಚನ ಪಿತಾಮಹ ಡಾ. ಪಿ.ಜಿ. ಹಳಕಟ್ಟಿ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಆನ್‌ಲೈನ್ ರಸಪ್ರಶ್ನೆ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಡಾ. ವಿ.ಜಿ. ಸಂಗಮ, ಡಾ. ಪಿ.ವಿ..ಮಾಳಜಿ, ಡಾ. ರಮೇಶ ಮಲ್ಲಾಡಿ ಮತ್ತಿತರರಿದ್ದಾರೆ. 
ಜಿಲ್ಲೆ

ರಸಪ್ರಶ್ನೆ ಸ್ಪರ್ಧೆಯಿಂದ ಜ್ಞಾನ ವೃದ್ಧಿ

ದತ್ತಾತ್ರೇಯ ಪಿ ಕುಲಕರ್ಣಿ

ವಿಜಯಪುರ: ನಗರದ ಬಿಎಲ್‌ಡಿಇ ಸಂಸ್ಥೆಯ ವಚನ ಪಿತಾಮಹ ಡಾ. ಪಿ.ಜಿ. ಹಳಕಟ್ಟಿ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ತಂತ್ರಜ್ಞಾನ ದಿನದ ಅಂಗವಾಗಿ ಇತ್ತೀಚೆಗೆ ಆನ್‌ಲೈನ್ ರಸಪ್ರಶ್ನೆ ಸ್ಪರ್ಧೆ ನಡೆಯಿತು.

ಕೇಂದ್ರ ಗ್ರಂಥಾಲಯದ ಸಹಯೋಗದೊಂದಿಗೆ ಸಂಶೋಧನೆ ಮತ್ತು ಅಭಿವೃದ್ಧಿ ಕೋಶವು ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಾಷ್ಟ್ರೀಯ ತಂತ್ರಜ್ಞಾನ 2025 ರ ಅಧಿಕೃತ ಘೋಷವಾಕ್ಯ ಯಂತ್ರ - ಹೊಸ ತಂತ್ರಜ್ಞಾನ, ಸಂಶೋಧನೆ ಮತ್ತು ವೇಗವರ್ಧನೆಯನ್ನು ಮುಂದುವರಿಸಲು ಯುಗಾಂತರ. 1998 ರಲ್ಲಿ ನಡೆಸಲಾದ ಪೋಖ್ರಾನ್- ಐಐ ಪರಮಾಣು ಪರೀಕ್ಷೆಗಳನ್ನು ಗುರುತಿಸಲು ಭಾರತದಲ್ಲಿ ಈ ದಿನವನ್ನು ಪ್ರತಿವರ್ಷ ಮೇ 11ರಂದು ಆಚರಿಸಲಾಗುತ್ತದೆ.

ಕಾಲೇಜಿನ ನಿರ್ದೇಶಕ ಡಾ. ವಿ.ಜಿ. ಸಂಗಮ ಮಾತನಾಡಿ, ರಸಪ್ರಶ್ನೆ ಸ್ಪರ್ಧೆಗಳು ವಿದ್ಯಾರ್ಥಿಗಳಿಗೆ ಜ್ಞಾನ ಹೆಚ್ಚಿಸುತ್ತವೆ. ಅಲ್ಲದೆ, ಸ್ಪರ್ಧಾತ್ಮಕತೆಯನ್ನು ಸೃಷ್ಟಿಸುತ್ತವೆ ಎಂದರು.

ಆಯೋಜಕರಾದ ಡಾ. ಎಂ.ಎಂ. ಬಾಚಲಾಪುರ, ಡಾ. ಕೈಲಾಶ ಚಡಚಣ, ಡಾ. ಶಶಿಕಾಂತ ಚೋಳಕೆ, ಡಾ. ರಮೇಶ ಮಲ್ಲಾಡಿ ಆನ್‌ಲೈನ್ ರಸಪ್ರಶ್ನೆ ನೆರವೇರಿಸಿದರು. ರಸಪ್ರಶ್ನೆಯಲ್ಲಿ 250 ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಿಎಸ್ ವಿಭಾಗದ ವಿದ್ಯಾರ್ಥಿ ಸಂಜನಾ ಪಾಟೀಲ ಪ್ರಥಮ, ಸಂದೀಪ ಚವಾಣ ದ್ವಿತೀಯ ಹಾಗೂ ಶ್ರೇಯಾ ಚವಾಣ ತೃತೀಯ ಬಹುಮಾನ ಪಡೆದರು.

ಉಪ ಪ್ರಾಚಾರ್ಯ ಡಾ.ಲೀನಾ ರಾಘಾ, ಡಾ. ಪಿ.ವಿ. ಮಾಳಜಿ ಮತ್ತಿತರರಿದ್ದರು.