ಯಲಬುರ್ಗಾ ತಾಲೂಕಿನ ಮುಧೋಳದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಂಥಪಾಲಕರ ದಿನ ಕಾರ್ಯಕ್ರಮದಲ್ಲಿ ಗ್ರಂಥಾಲಯ ವಿಜ್ಞಾನದ ಪಿತಾಮಹ ಡಾ.ಎಸ್.ಆರ್.ರಂಗನಾಥನ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಗ್ರಾಪಂ ಅಧ್ಯಕ್ಷೆ ಮಮ್ತಾಜ್‌ಬಿ ಹಿರೇಮನಿ, ಉಪಾಧ್ಯಕ್ಷ ಅಶೋಕ ಭಜಂತ್ರಿ, ಪಿಡಿಒ ಫಕೀರಪ್ಪ ಕಟ್ಟಿಮನಿ, ಪ್ರಮುಖರಾದ ಬಸವರಾಜ ಮ್ಯಾಗೇರಿ, ಯಮನೂರಪ್ಪ ಇದ್ದರು. 
ಜಿಲ್ಲೆ

ಜ್ಞಾನ ಜಗತ್ತನ್ನೇ ಆಳಬಲ್ಲದು

ಯಲಬುರ್ಗಾ: ಮನುಷ್ಯನ ಸರ್ವತೋಮುಖ ಬೆಳವಣಿಗೆಗೆ ಪುಸ್ತಕಗಳು ಅವಶ್ಯ ಎಂದು ಪಿಡಿಒ ಫಕೀರಪ್ಪ ಕಟ್ಟಿಮನಿ ಹೇಳಿದರು.

ತಾಲೂಕಿನ ಮುಧೋಳ ಗ್ರಾಪಂ ಗ್ರಂಥಾಲಯದಲ್ಲಿ ಯಲಬುರ್ಗಾ-ಕುಕನೂರು ಗ್ರಾಪಂ ಗ್ರಂಥಾಲಯ ಮೇಲ್ವಿಚಾರಕರ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಂಥಪಾಲಕರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಗ್ರಂಥಾಲಯ ಸದುಪಯೋಗ ಪಡಿಸಿಕೊಂಡು ಜ್ಞಾನವಂತರಾಗಬೇಕು. ಆಧುನಿಕ ಕಾಲದಲ್ಲಿ ತಂತ್ರಜ್ಞಾನ ಎಷ್ಟೇ ಬೆಳೆವಣಿಗೆ ಕಂಡರೂ ಗ್ರಂಥಾಲಯಗಳಿಗೆ ತನ್ನದೇಯಾದ ಮಹತ್ವವಿದೆ.

ಗ್ರಂಥಾಲಯಗಳಲ್ಲಿ ಸಾಹಿತ್ಯಕ್ಕೆ ಸಂಬಂಧಿಸಿದ ಪುಸ್ತಗಳು, ನಿಯತಕಾಲಿಕೆ, ದಿನಪತ್ರಿಗಳು ದೊರೆಯುತ್ತಿದ್ದು, ಓದಿಜ್ಞಾನ ವೃದ್ಧಿಸಿಕೊಳ್ಳಬೇಕು. ಜ್ಞಾನ ಜಗತ್ತನ್ನೇ ಆಳಬಲ್ಲದು ಎಂಬುದಕ್ಕೆ ಗ್ರಂಥಾಲಯಗಳು ನಿದರ್ಶನ ಎಂದರೆ ತಪ್ಪಾಗದು.

ಗ್ರಾಪಂ ಅಧ್ಯಕ್ಷೆ ಮಮ್ತಾಜ್‌ಬಿ ಹಿರೇಮನಿ, ಉಪಾಧ್ಯಕ್ಷ ಅಶೋಕ ಭಜಂತ್ರಿ, ಪ್ರಮುಖರಾದ ಬಸವರಾಜ ಮ್ಯಾಗೇರಿ, ಯಮನೂರಪ್ಪ, ಗವಿಸಿದ್ದಮ್ಮ, ನಿಂಗಪ್ಪ ಗೊಂದಿ, ಖಾಜಾಬನಿ ಬಾಗಲಿ, ಲಾಲ್‌ಅಹ್ಮದ್ ಇದ್ದರು.