ಬಾಗಲಕೋಟೆ ನಗರದ ಬಿವಿವಿ ಸಂಘದ ನೂತನ ಸಭಾಭವನದಲ್ಲಿ ಶನಿವಾರ ಹಮ್ಮಿಕೊಂಡ ಪಿಯು.ಸಿ ದ್ವಿತೀಯ ವಷರ್ದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲಾಯಿತು. ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎನ್.ಪಟ್ಟಣಶೆಟ್ಟಿ, ನಿವೃತ್ತ ಪ್ರಾಚಾರ್ಯ ಬಿ.ಆರ್.ಪಾಟೀಲ, ಪ್ರಾಚಾರ್ಯ ಎಸ್. ಆರ್. ಮುಗನೂರಮಠ, ಪಿಯುಸಿ ವಿಭಾಗದ ಸಂಚಾಲಕ ಡಾ.ಆರ್.ಎಂ. ಬೆಣ್ಣೂರ, ಕ್ರೀಡಾ ಸಮೀತಿ ಸಂಯೋಜಕ ಎಂ.ಎಂ.ದೇವನಾಳ ಇತರರು ಇದ್ದರು. 
ಜಿಲ್ಲೆ

ಹಣಕ್ಕಿಂತ ಜ್ಞಾನ ಸಂಪಾದನೆ ಅವಶ್ಯಕ

ದತ್ತಾತ್ರೇಯ ಪಿ ಕುಲಕರ್ಣಿ

ಬಾಗಲಕೋಟೆ: ಉತ್ತಮ ಜೀವನ ರೂಪಿಸಿಕೊಳ್ಳಲು ಸಹಾಯಕವಾಗುವ ಜ್ಞಾನವೇ ನಿಜವಾದ ಶಿಕ್ಷಣ. ಜ್ಞಾನವಂತನಾದ ವ್ಯಕ್ತಿ ಪ್ರಪಚಂದ ಯಾವ ಮೂಲೆಯಲ್ಲಾದರೂ ಯಶಸ್ವಿ ಬದುಕು ಕಟ್ಟಿಕೊಳ್ಳಲು ಸಾಧ್ಯ. ಅಂತಹ ಶಿಕ್ಷಣವನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಶಾಲೆ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎನ್.ಪಟ್ಟಣಶೆಟ್ಟಿ ಹೇಳಿದರು.

ನಗರದ ಬಿವಿವಿ ಸಂಘದ ನೂತನ ಸಭಾಭವನದಲ್ಲಿ ಶನಿವಾರ ಬಸವೇಶ್ವರ ಪದವಿ ಪೂರ್ವ ಕಲಾ ಮಹಾವಿದ್ಯಾಲಯದ ಪ್ರತಿಭಾ ಪುರಸ್ಕಾರ, ವಾರ್ಷಿಕ ವಿಶೇಷ ಸಂಚಿಕೆ ಕಲಾಸ್ಫೂರ್ತಿ ಬಿಡುಗಡೆ ಹಾಗೂ ಪಿಯುಸಿ ದ್ವಿತೀಯ ವಷರ್ದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಅವರು ಮಾತನಾಡಿದರು.
ಹಣ ಸಂಪಾದಿಸುವುದು ಮುಖ್ಯವಲ್ಲ. ಜ್ಞಾನ ಸಂಪಾದನೆ ಮುಖ್ಯ. ಅಂಕಗಳಿಗಾಗಿ ಕಲಿಯಬೇಡಿ, ಸಮಾಜದಲ್ಲಿ ಉತ್ತಮ ವ್ಯಕಿಯಾಗಲು ಶಿಕ್ಷಣ ಪಡೆಯಿರಿ. ಅಕ್ಕಮಹಾದೇವಿ, ಬಸವಣ್ಣನವರ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮಾದರಿ ವ್ಯಕ್ತಿಗಳಾಗಿ ರೂಪಗೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ನಿವೃತ್ತ ಪ್ರಾಚಾರ್ಯ ಬಿ.ಆರ್.ಪಾಟೀಲ ಮಾತನಾಡಿ, ಜ್ಞಾನ ಸಂಪಾದನೆ ಮತ್ತು ಸಾಮರ್ಥ್ಯದಿಂದ ಯಶಸ್ಸು ಸಾಧ್ಯ. ನಿಮ್ಮ ವರ್ತನೆ ನಡೆ -ನುಡಿಯಿಂದ ನಿಮ್ಮ ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ಹುದ್ದೆ ಪಡೆಯುವುದು ದೊಡ್ಡ ಸಾಧನೆಯಲ್ಲ. ನಿಮ್ಮ ತಂದೆಗಿಂತ ಒಂದು ಹೆಜ್ಜೆ ನ್ಯಾಯಬದ್ಧವಾಗಿದ್ದರೆ ಅದೇ ಯಶಸ್ಸು. ಶಿಕ್ಷಣದೊಂದಿಗೆ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಿ ಎಂದರು. ಮಹಾವಿದ್ಯಾಲಯದ ಪ್ರಾಚಾರ್ಯ ಎಸ್. ಆರ್. ಮುಗನೂರಮಠ, ಪಿಯುಸಿ ವಿಭಾಗದ ಸಂಚಾಲಕರಾದ ಡಾ.ಆರ್.ಎಂ. ಬೆಣ್ಣೂರ, ಕ್ರೀಡಾ ಸಮಿತಿ ಸಂಯೋಜಕ ಎಂ.ಎಂ.ದೇವನಾಳ, ಸಾಂಸ್ಕೃತಿಕ ಚಟುವಟಿಕೆ ಸಮಿತಿ ಸಂಯೋಜಕಿ ವಿ.ಎಸ್ ಚಿಗರಿ, ಯುವರಾಜ ನಿರಾಕಾರಿ, ಅಂಬಿಕಾ ಹರಿಜನ ಉಪಸ್ಥಿತರಿದ್ದರು. ವಿವಿಧ ಕ್ಷೇತ್ರದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಣೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಿ ಪ್ರೋತ್ಸಾಹಿಸಲಾಯಿತು.

ಪ್ರಬಂಧ, ಚರ್ಚಾ ಸ್ಪರ್ಧೆ,ಆಶುಭಾಷಣ, ಏಕಾಭಿನಯ, ಭಾವಗೀತೆ ಹಾಗೂ ಕ್ರೀಡಾ ವಲಯದಲ್ಲಿ ಕಬಡ್ಡಿ, ವಾಲಿಬಾಲ್, ಖೋ ಖೋ, ಥ್ರೋಬಾಲ್, ಓಟದ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಅತಿಥಿಗಳು ಪ್ರಶಸ್ತಿ ಪ್ರಧಾನ ಮಾಡಿದರು.