ಜಿಲ್ಲೆ

ಭಗವಂತನ ಮಹಿಮೆ ಅರಿತರೆ ದೈವ ಸಾಕ್ಷಾತ್ಕಾರ

ಶಿರಸಿ: ಭಗವಂತನ ಮಹಿಮೆಗಳನ್ನು ಅನುಭವಿಸಿದರೆ ಅದರಿಂದ ಜ್ಞಾನದ ಬೆಳಕು ಲಭಿಸುತ್ತದೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳು ನುಡಿದರು.

ಅವರು ಸ್ವರ್ಣವಲ್ಲೀ ಮಠದಲ್ಲಿ ಚಾತುರ್ವಸ್ಯ ವೃತ ಸಂಕಲ್ಪದ ಕಾಲದಲ್ಲಿ ಕಿಸಲವಾಡಾ ಹಾಗೂ ಶಿವಳ್ಳಿ ಸೀಮಾ ಶಿಷ್ಯ, ಭಜಕರು ಶುಕ್ರವಾರ ಸಲ್ಲಿಸಿದ ಗುರು ಸೇವೆ ಸ್ವೀಕರಿಸಿ ಆಶೀರ್ವಚನ ನುಡಿದರು.

ಭಗವಂತನ ಮಹಿಮೆಗಳು ಅನೇಕ. ಮಹಿಮೆಗಳನ್ನು ಮಹಾತ್ಮರು ಬಹಳ ಶ್ರದ್ಧೆಯಿಂದ ಚಿಂತನೆ ಮಾಡುತ್ತಿದ್ದರು. ಆಗ

ಪರಮಾತ್ಮನ ಅನುಭವ ಉಂಟಾಗುತ್ತಿದ್ದವು. ನಮಗೂ ಪರಮಾತ್ಮನ ಅನುಭವ ಉಂಟಾಗಲು ಭಗವಂತನ ಮಹಿಮೆ ತಿಳಿಯಬೇಕು. ಮಹಿಮಾ ವಿಶೇಷಗಳನ್ನು ಧ್ಯಾನದ ಮೂಲಕ ಸ್ಮರಿಸಿಕೊಂಡರೆ ಅಂಥವರಿಗೆ ಆ ಭಗವಂತನೇ ಅನುಗ್ರಹಿಸುತ್ತಾನೆ ಎಂದರು.

ಭಗವಂತ ನಮ್ಮ ಹೃದಯದೊಳಗೆ ಇದ್ದುಕೊಂಡು ಅಜ್ಞಾನ ಹೋಗಲಾಡಿಸಿ ಜ್ಞಾನದ ಬೆಳಕು ಸೃಷ್ಟಿಸುತ್ತಾನೆ. ಒಳಗಿರುವ ಕತ್ತಲು ತೆರೆದು ಬೆಳಕು ಮೂಡಿಸುವ ಕಾರ್ಯ ಭಗವಂತನಿಂದ ಆಗಬೇಕು. ಅದಕ್ಕಾಗಿ ಧ್ಯಾನ, ಪೂಜೆ, ಪುನಸ್ಕಾರ ಮಾಡಬೇಕು ಎಂದರು.

ಪ್ರಮುಖರಾದ ಆರ್.ಎಸ್.ಹೆಗಡೆ ಭೈರುಂಬೆ, ವಿಶ್ವನಾಥ ಹೆಗಡೆ ಅತ್ತಿಸರ, ಪ್ರಶಾಂತ ಭಟ್ಟ ಬೆಣ್ಣೆಗದ್ದೆ, ರಾಮಕೃಷ್ಣ ಭಟ್ಟ ಬಕ್ಕಳ, ಮಾದೇವ ಹೆಗಡೆ ಶಶಿಮನೆ, ಸುಮಾನ ಭಟ್ಟ ಬೆಣ್ಣೆಗದ್ದೆ, ಗಣಪತಿ ಭಟ್ಟ ಮಣದೂರ, ಶ್ರೀ ಮಠದ ಕಾರ್ಯದರ್ಶಿ ಗಣಪತಿ ಹೆಗಡೆ ಗೊಡವೇಮನೆ, ಮಂಜುನಾಥ ಹೆಗಡೆ ಹೆಗಡೆಮನೆ, ಪ್ರಸನ್ನ ಭಟ್ಟ ಓಣಿಕೈ ಇತರರು ಇದ್ದರು.

ಮಠದ ಲಾಂಛನದಲ್ಲಿ ಕಮಲದ ಒಳಗೆ ಜ್ಯೋತಿಯ ಚಿತ್ರವಿದೆ. ಹೃದಯವನ್ನು ವೇದಗಳು ಕಮಲಕ್ಕೆ ಹೋಲಿಸುತ್ತದೆ. ಆ ಕಮಲದೊಳಗೆ ಇರುವದೇ ಪರಂಜ್ಯೋತಿ. ಯಾರು ಯೋಗದ ಮೂಲಕ ಒಳಗಿನ ತಣ್ಣನೆಯ ಜ್ಯೋತಿಯನ್ನು ತಲುಪುತ್ತಾರೋ ಅವರಿಗೆ ತಂಪಿನ ಅನುಭವ ಆಗುತ್ತದೆ. - ಸ್ವರ್ಣವಲ್ಲೀ ಶ್ರೀ