ಶಿರಹಟ್ಟಿಯ ಎಸ್‌ಎಫ್‌ಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಲಾಯಿತು 
ಜಿಲ್ಲೆ

ಶಿಕ್ಷಕ ವೃತ್ತಿಯ ಪಾವಿತ್ರೃ ಅರಿಯಿರಿ

ರವಿ ಎಸ್. ಬಳೂಟಗಿ

ಶಿರಹಟ್ಟಿ: ಪಟ್ಟಣದ ಎಸ್‌ಎಫ್‌ಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಎನ್.ಎಂ. ಮಹೇಂದ್ರಕರ, ಬಿ.ಎಸ್. ಅಕ್ಕಿ, ಎಚ್.ಎನ್. ತಳಗಡಿ ಅವರನ್ನು ಸನ್ಮಾನಿಸಲಾಯಿತು.

ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಿ.ಸಿ. ನೂರಶೆಟ್ಟರ ಮಾತನಾಡಿ, ದೇಶದ ಶ್ರೇಷ್ಠ ದಾರ್ಶನಿಕ, ತತ್ವಜ್ಞಾನಿ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಜನ್ಮದಿನದ ಸ್ಮರಣೆಯಲ್ಲಿ ಶಿಕ್ಷಕರ ದಿನ ಆಚರಿಸಲಾಗುತ್ತಿದೆ. ಸುಭದ್ರ ದೇಶ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದ್ದು, ಪ್ರತಿಯೊಬ್ಬ ಶಿಕ್ಷಕ ಡಾ. ರಾಧಾಕೃಷ್ಣನ್ ಅವರ ಸರಳ ವ್ಯಕ್ತಿತ್ವ, ವಿಚಾರಧಾರೆ ಮತ್ತು ಆದರ್ಶಗಳನ್ನು ಮೈಗೂಡಿಸಿಕೊಂಡು, ಶಿಕ್ಷಕ ವೃತ್ತಿಯ ಪಾವಿತ್ರೃ ಅರಿತು, ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿದಾಗ ಅವರ ಭವಿಷ್ಯ ಜೀವನ ಉಜ್ವಲವಾಗುತ್ತದೆ ಎಂದರು.

ಕಸಾಪ ತಾಲೂಕಾಧ್ಯಕ್ಷ ಕೆ.ಎ. ಬಳಿಗೇರ ಮಾತನಾಡಿ, ವಿದ್ಯಾರ್ಥಿಗಳು ದೇಶದ ಭವಿಷ್ಯ. ಅವರ ಆಶೋತ್ತರಗಳಿಗೆ ಚ್ಯುತಿ ಬಾರದಂತೆ ಶಿಕ್ಷಣ ನೀಡಿದಾಗ ಗುರುಸ್ಥಾನದ ಮಹಿಮೆ ಹೆಚ್ಚಿಸಲು ಸಾಧ್ಯ ಎಂದರು. ಸಿಆರ್‌ಪಿ ಎನ್.ಎನ್, ಸಾವಿರಕುರಿ, ಮುಖ್ಯೋಪಾಧ್ಯಾಯ ಶಿವಕುಮಾರ ಶೆಟ್ಟರ, ಆಡಳಿತಾಧಿಕಾರಿ ಸುನಿತಾ ಅಂಗಡಿ ಇದ್ದರು. ಕಾವ್ಯಾ ಗುಡಗೇರಿ, ಚೇತನ ಹಿರೇಮಠ, ಎಸ್ತೇರಾ ಕುರಿ ಕಾರ್ಯಕ್ರಮ ನಿರ್ವಹಿಸಿದರು.