ವಿಜಯಪುರ: ಕೇವಲ ಅಂಕ ಗಳಿಸುವುದೇ ಶಿಕ್ಷಣದ ಮಾನದಂಡವಲ್ಲ. ಸಮಾಜದಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವ ಸಮಾಜಮುಖಿ ಶಿಕ್ಷಣ ಇಂದು ಅಗತ್ಯವಿದೆ ಎಂದು ವೇದ ಅಕಾಡೆಮಿಯ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲ್ಲೂರ ಹೇಳಿದರು.
ನಗರದ ಕಿತ್ತೂರು ರಾಣಿ ಚನ್ನಮ್ಮ ಸಭಾಭವನದಲ್ಲಿ ಎಕ್ಸಲೆಂಟ್ ಅಕಾಡೆಮಿ ಪ್ರಮುಖ ಪ್ರಾಯೋಜಕತ್ವ ಹಾಗೂ ಧಾರವಾಡದ ಬಾಲವಿಕಾಸ ಅಕಾಡೆಮಿ ಸಹಯೋಗದಲ್ಲಿ ವಿಜಯವಾಣಿ ಆಯೋಜಿಸಿದ್ದ ಎಜುಕೇಷನ್ ಎಕ್ಸ್ ಪೋ ದಲ್ಲಿ ಎರಡನೇ ದಿನದ ಕಾರ್ಯಕ್ರಮದಲ್ಲಿ ಅವರು ಮಕ್ಕಳಿಗೆ ಮಾರ್ಗದರ್ಶನ ನೀಡಿದರು.
ಸಮಾಜದಲ್ಲಿನ ಸಮಸ್ಯೆ ಅರ್ಥಮಾಡಿಕೊಂಡು ಪರಿಹಾರ ಕಂಡುಕೊಳ್ಳುವ ವ್ಯಕ್ತಿ ತಾನು ಬೆಳೆಯುವುದರ ಜತೆ ಸಮಾಜವನ್ನು ಬೆಳಸುತ್ತಾನೆ, ಪ್ರತಿ ವಿದ್ಯಾರ್ಥಿಗಳು ಅಂಥ ಶಿಕ್ಷಣ ಪಡೆಯಬೇಕಿದೆ. ಹೆಚ್ಚು ಅಂಕ ಪಡೆದು, ಉತ್ತಮ ಕೆಲಸ ಮಾಡಿ ಕೈತುಂಬ ವೇತನ ಪಡೆದು, ನೆಮ್ಮದಿಯಾಗಿ ಜೀವನ ಸಾಗಿಸಬೇಕು ಎಂಬ ಸ್ವಾರ್ಥ ಭಾವನೆ ಮಕ್ಕಳ ತಲೆಯಲ್ಲಿರುತ್ತದೆ. ಪಾಲಕರು, ಶಿಕ್ಷಕರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಮೂಲಕ ಶಿಕ್ಷಣದ ಜತೆ ಮಾನವೀಯ ಮೌಲ್ಯ ಬಿತ್ತಬೇಕು ಎಂದು ಸಲಹೆ ನೀಡಿದರು.
ನೌಕರಿ ಪಡೆಯುವುದೇ ಶಿಕ್ಷದಣದ ಮುಖ್ಯಉದ್ದೇಶಲ್ಲ. ಬದುಕಿನ ಪಾಠ ಕಲಿಸುವ ಶಿಕ್ಷಣ ಪಡೆಯಬೇಕು. ಹೆಚ್ಚು ಅಂಕ ಪಡೆದಿರುವ ಎಷ್ಟೋ ಜನರು ಜೀವನವೆಂಬ ಪರೀೆಯಲ್ಲಿ ೇಲಾಗುತ್ತಿದ್ದಾರೆ. ಇದಕ್ಕೆ ಮಾನವೀಯ ಮೌಲ್ಯಯುತ ಶಿಣದ ಕೊರತೆಯೇ ಕಾರಣವಾಗಿದ್ದು, ವಿದ್ಯೆಯ ಜತೆ ವಿನಯ ಇರಬೇಕು ಎಂದರು.
ಯಾವುದು ಅಸಾಧ್ಯವೋ ಅದು ಸಾಧ್ಯವನ್ನಾಗಿಸುವ ಛಲ ವಿದ್ಯಾರ್ಥಿಗಳಲ್ಲಿರಬೇಕು. ಕೇವಲ ಪುಸ್ತಕದ ಹುಳುಗಳಾಗಬಾರದು. ವ್ಯವಹಾರಿಕ ಜ್ಞಾನ ಪಡೆಯಲು ಪ್ರಯತ್ನಿಸಬೇಕು ಎಂದು ಮಕ್ಕಳಿಗೆ ಸಲಹೆ ನೀಡಿದರು