ಜಿಲ್ಲೆ

ದರ್ಶನ್​ ವಿಚಾರಕ್ಕೆ ಚಾಕು ಇರಿತ

ಗಂಗಾಧರ ಬಿ ವಿ

ಬಿಡದಿ: ತಾಲೂಕಿನ ಸೂಲಿಕೆರೆ ಪಾಳ್ಯ ಗ್ರಾಮದಲ್ಲಿ ನಟ ದರ್ಶನ್​ ಹೆಸರನ್ನು ಕೂಗುವ ವಿಚಾರಕ್ಕೆ ಗಲಾಟೆ ನಡೆದು ವ್ಯಕ್ತಿಯ ಕುತ್ತಿಗೆಗೆ ಚಾಕು ಇರಿಯಲಾಗಿದೆ.

ದೊಡ್ಡಮಣ್ಣುಗುಡ್ಡೆ ಗ್ರಾಮದ ವೆಂಕಟಸ್ವಾಮಿ ಗಾಯಳು. ರಾಮನಗರ ತಾಲೂಕಿನ ದೊಡ್ಡಮಣ್ಣುಗುಡ್ಡೆಯ ಕಟ್ಟಡದ ಮೇಸಿ ಸುರೇಶ್​ ಅವರು ಸುಲಿಕೆರೆ ಬಡಾವಣೆಯಲ್ಲಿ ಮನೆ ನಿರ್ಮಾಣದ ಕೆಲಸಕ್ಕೆಂದು ಅದೇ ಗ್ರಾಮದ ವೆಂಕಟಸ್ವಾಮಿ ಹಾಗೂ ಐಜೂರಿನ ಕಿರಣ್​, ಮಹದೇವ ಎಂಬುವರನ್ನು ಕರೆದುಕೊಂಡು ಹೋಗಿ ಕೆಲಸದ ಜಾಗದಲ್ಲೇ ಸಣ್ಣದೊಂದು ಶೆಡ್​ ನಿರ್ಮಾಣ ಮಾಡಿಕೊಂಡು ಅಲ್ಲೆ ಕೆಲಸ ಮಾಡಿಕೊಂಡಿದ್ದರು.

ಗುರುವಾರ ರಾತ್ರಿ ಶೆಡ್​ ಬಳಿ ಮೂವರು ದರ್ಶನ್​ ಬಗ್ಗೆ ಮಾತನಾಡುತ್ತ ಡಿಬಾಸ್​ ಡಿಬಾಸ್​ ಎಂದು ಕೂಗಾಡುತ್ತಿದ್ದರು. ಈ ವೇಳೆ ವೆಂಕಟಸ್ವಾಮಿ ಅಕ್ಕಪಕ್ಕದಲ್ಲಿ ಮನೆಗಳಿವೆ, ಕಿರುಚಬೇಡಿ ಎಂದು ಹೇಳಿದ್ದ. ಇದಕ್ಕೆ ಕಿರಣ್​, ನಮ್ಮ ಡಿಬಾಸ್​ ಬಗ್ಗೆ ನಿನಗೆ ಏನ್​ ಗೊತ್ತು ಎಂದು ಗಲಾಟೆ ತೆಗೆದು ಚಾಕುವಿನಿಂದ ವೆಂಕಟಸ್ವಾಮಿ ಕುತ್ತಿಗೆಗೆ ಇರಿದಿದ್ದಾನೆ. ಜತೆಯಲ್ಲಿದ್ದ ಮಹದೇವ ಕೂಡ ಹಲ್ಲೆ ಮಾಡಿದ್ದ ಎನ್ನಲಾಗಿದೆ.

ಅಕ್ಕಪಕ್ಕದವರು ವೆಂಕಟಸ್ವಾಮಿ ಅವರನ್ನು ರಸಿ ರಾಮೋಹಳ್ಳಿಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಿದರು. ಶುಕ್ರವಾರ ಗಾಯಾಳು ವೆಂಕಟಸ್ವಾಮಿಪತ್ನಿ ಶಾಂತಾ ಕುಂಬಳಗೂಡು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.