ಜಿಲ್ಲೆ

ಚಾಕು ಇರಿತ

ಮರಿದೇವ ಹೂಗಾರ

ಹುಬ್ಬಳ್ಳಿ: ಬುದ್ಧಿ ಮಾತು ಹೇಳಿದಕ್ಕೆ ಇಬ್ಬರು ಸೇರಿ ಜಮಾತ್ ಸದಸ್ಯನ ಮೇಲೆ ಹಲ್ಲೆ ಮಾಡಿ, ಚಾಕುವಿನಿಂದ ಇರಿದ ಘಟನೆ ಇಲ್ಲಿಯ ತಿಮ್ಮಸಾಗರ ರಸ್ತೆಯ ಬೇಪಾರಿ ಪ್ಲಾಟ್‌ನಲ್ಲಿ ಸೋಮವಾರ ತಡರಾತ್ರಿ ನಡೆದಿದೆ.

ಜಮಾತ್ ಸದಸ್ಯ ಮಹ್ಮದ್ ಸಾಧಿಕ್ ಗಾಯಗೊಂಡಿದ್ದು ಕೆಎಂಸಿಆರ್‌ಐಗೆ ದಾಖಲಿಸಲಾಗಿದೆ. ಮಹ್ಮದ್ ಸಾಧಿಕ್ ಮೊಹರಂ ಕಿಚಡಿ ಕಾರ್ಯಕ್ರಮದಲ್ಲಿ ಅಲ್ತಾಫ್ ಮತ್ತು ಅಫ್ತಾಬ್‌ಗೆ ಬುದ್ಧಿ ಮಾತು ಹೇಳಿದ್ದ ಎನ್ನಲಾಗಿದೆ. ಇದೇ ವಿಷಯವಾಗಿ ಮತ್ತೊಮ್ಮೆ ಎಲ್ಲರೂ ಚರ್ಚಿಸಿ ಹೊರಬಂದಾಗ ಅಲ್ತಾಫ್ ಮತ್ತು ಅಫ್ತಾಬ್, ಸಾದಿಕ್ ಮೇಲೆ ಏಕಾಏಕಿ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.