ಜಿಲ್ಲೆ

ಕೆಎಂಪಿಕೆ ಚಾರಿಟಬಲ್ ಟ್ರಸ್ಟ್‌ನಿಂದ ಹಾಡಿ ವಾಸಿಗಳಿಗೆ ಹೊದಿಕೆ ವಿತರಣೆ

ಮೈಸೂರು: ಎಚ್.ಡಿ.ಕೋಟೆ ಕಾಡಿನಲ್ಲಿ ವಾಸಿಸುತ್ತಿರುವ ಹಾಡಿ ನಿವಾಸಿಗಳಿಗೆ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್‌ನಿಂದ ಇತ್ತೀಚೆಗೆ ಹೊದಿಕೆ ವಿತರಿಸಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಹಿರಿಯ ಪತ್ರಕರ್ತ ಅನಿಲ್‌ಕುಮಾರ್ ಮಾತನಾಡಿ, ಇತ್ತೀಚೆಗೆ ಜಿಲ್ಲೆಯಲ್ಲಿ ವ್ಯಾಪಕವಾದ ಚಳಿ ಪ್ರಾರಂಭವಾಗಿದ್ದು, ವಾತಾವರಣದಲ್ಲಿನ ಉಷ್ಣಾಂಶ ಕಡಿಮೆಯಾಗಿ, ತಂಪಾದ ವಾತಾವರಣ ಕಂಡುಬರುತ್ತದೆ. ಈ ಸಂದರ್ಭದಲ್ಲಿ ದೇಹಕ್ಕೆ ವಿವಿಧ ರೀತಿಯ ತೊಂದರೆಗಳಾಗುತ್ತವೆ. ಆದ್ದರಿಂದ ಮುಂಜಾಗ್ರತೆ ತೆಗೆದುಕೊಳ್ಳುವುದು ಅಗತ್ಯವಾಗಿದೆ ಎಂದು ಹೇಳಿದರು.

ಶೀತ, ನೆಗಡಿ, ಜ್ವರ, ಅಜೀರ್ಣ, ಅಲರ್ಜಿಯಂತ ಸಮಸ್ಯೆಗಳು ಕಂಡುಬರುತ್ತವೆ. ಚಳಿಯ ತೀವ್ರತೆಯಿಂದ ರಕ್ತ ಸಂಚಾರದಲ್ಲಿ ತೊಂದರೆಯಾಗುವ ಸಂದರ್ಭವಿರುವುದು ಪಾರ್ಶ್ವ್ವವಾಯು, ಅಧಿಕ ಮಧುಮೇಹ, ಕಡಿಮೆ ರಕ್ತದೊತ್ತಡ, ಹೃದಯಾಘಾತಗಳಾಗುವ ಸಂಭವ ಹೆಚ್ಚಾಗಿರುತ್ತದೆ. ಸ್ವಚ್ಛತೆ ಕಾಪಾಡುವುದಲ್ಲದೆ, ಜಂಕ್‌ಫುಡ್ ಸೇವನೆ ಮಾಡಬೇಡಿ ಎಂದು ಕೋರಿದರು.

ಯೋಗ, ಧ್ಯಾನ, ವ್ಯಾಯಾಮ, ನಡಿಗೆಯಂತಹ ದೈಹಿಕ ಚಟುವಟಿಕೆ ಮಾಡಬೇಕು. ವಿಟಮಿನ್-ಡಿ ಹೊಂದಿರುವ ಸೂರ್ಯನ ಬೆಳಕು ಪಡೆಯಬೇಕು. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಬಹುದಾಗಿದೆ. ಮಧುಮೇಹ ಹೊಂದಿರುವವರು ತಪ್ಪದೇ ಔಷಧ ತೆಗೆದುಕೊಳ್ಳಬೇಕು. ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಕೊಳ್ಳಿ, ನಿಯಮಿತವಾಗಿ ನೀರು ಕುಡಿಯಿರಿ. ಚಳಿಯಲ್ಲಿ ಸುತ್ತಾಟ ಮಾಡುವುದು ಬೇಡ ಎಂದು ಅನೇಕ ಸಲಹೆಗಳನ್ನು ನೀಡಿದರು.

ಪ್ರಜ್ಞಾವಂತ ನಾಗರಿಕ ವೇದಿಕೆ ಅಧ್ಯಕ್ಷ ಕಡಕೋಳ ಜಗದೀಶ್, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಮುಖಂಡ ಚಕ್ರಪಾಣಿ, ಅರಿವು ಸಂಸ್ಥೆ ಅಧ್ಯಕ್ಷ ಶ್ರೀಕಾಂತ್ ಕಶ್ಯಪ್, ಮೋಹನ್‌ಕುಮಾರ್ ಗೌಡ ಇತರರಿದ್ದರು.