ಜಿಲ್ಲೆ

ಕೆಪಿಎಂಇ ನಿಯಮಗ ಉಲ್ಲಂಸಿದ 5 ಆಸ್ಪತ್ರೆಗಳ ವಿರುದ್ಧ ಎಫ್ಐಆರ್ - 14 ಸಂಸ್ಥೆಗಳಿಗೆ ದಂಡ

ಪಂಕಜ ಕೆ.ಎಂ.

ಬೆಂಗಳೂರು: ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆಯ (ಕೆಪಿಎಂಇ) ನಿಯಮಗಳ ಉಲ್ಲಂಸಿದ ಐದು ಆಸ್ಪತ್ರೆಗಳ ವಿರುದ್ಧ ಎಫ್‌ಐಆರ್ ದಾಖಲಿಸಲು ಹಾಗೂ 14 ಸಂಸ್ಥೆಗಳಿಗೆ ದಂಡ ವಿಧಿಸುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಕೆಪಿಎಂಇ ನೋಂದಣಿ ಮತ್ತು ಕುಂದು ಕೊರತೆ ಪ್ರಾಧಿಕಾರದಿಂದ ಬುಧವಾರ ನಡೆದ ಸಭೆಯಲ್ಲಿ ಕೆಪಿಎಂಇ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಆರೋಗ್ಯಾಧಿಕಾರಿಗಳು 58 ಪ್ರಕರಣಗಳ ಕುರಿತು ವಿವರ ಸಲ್ಲಿಸಿದ್ದರು. ಇವುಗಳಲ್ಲಿ ನಿಯಮ ಉಲ್ಲಂಘಿಸಿದ ವೈದ್ಯಕೀಯ ಸಂಸ್ಥೆಗಳು, ಆಸ್ಪತ್ರೆಗಳು, ಕ್ಲಿನಿಕ್‌ಗಳು ಹಾಗೂ ಪುನರ್ವಸತಿ ಕೇಂದ್ರಗಳು ಸೇರಿವೆ.

ಸಭೆಯಲ್ಲಿ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು ನಿಯಮ ಉಲ್ಲಂಸಿರುವ ವಿದ್ಯಾರಣ್ಯಪುರದ ಸನ್‌ರೈಸ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಕಮಲಾನಗರದಲ್ಲಿರುವ ಸರ್ವಶಕ್ತಿ ಸಲಹಾ ಕೇಂದ್ರ, ಸಿ.ಕೆ. ಪಾಳ್ಯದ ಮಾ ಕ್ಲಿನಿಕ್, ಶೇಷಾದ್ರಿಪುರದ ಶ್ರೀ ಶಕ್ತಿ ಹೆಲ್ತ್ ಕೇರ್ ಹಾಗೂ ದೊಡ್ಡಕನ್ನಳ್ಳಿಯಲ್ಲಿರುವ ಹೆಲ್ತ್‌ಲೈನ್ ಪಾಲಿ ಕ್ಲಿನಿಕ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಸೂಚಿಸಿದ್ದಾರೆ.

14 ಸಂಸ್ಥೆಗಳಿಂದ 6.15 ಲಕ್ಷ ದಂಡ:

ನಿಯಮ ಉಲ್ಲಂಸಿದ 14 ಸಂಸ್ಥೆಗಳಿಂದ 6.15 ಲಕ್ಷ ದಂಡ ವಿಧಿಸಲಾಗಿದೆ. ಇವುಗಳಲ್ಲಿ ಚಿಕ್ಕಬಾಣಾವರದ ಶ್ರೀನಿವಾಸ ಆಸ್ಪತ್ರೆಗೆ 75 ಸಾವಿರ ದಂಡ ಹಾಕಲಾಗಿದೆ. ತಿಗಳರಪಾಳ್ಯ ಮುಖ್ಯರಸ್ತೆಯಲ್ಲಿರುವ ಅಂದ್ರಹಳ್ಳಿಯ ಮಾರುತಿ ಕ್ಲಿನಿಕ್, ಕಲ್ಯಾಣನಗರದ ಎಚ್‌ಎಸ್‌ಬಿಆರ್ ಲೇಔಟ್‌ನಲ್ಲಿರುವ ಟ್ರೈಲೈಫ್ ಆಸ್ಪತ್ರೆ, ಮಾರುತಿನಗರದಲ್ಲಿರುವ ಹುಸೈನ್ ಪಾಲಿ ಕ್ಲಿನಿಕ್, ಸಿಂಥನ್ ನಗರದ ವಿದ್ಯಾಸಾಗರ ಕ್ರಾಸ್‌ನಲ್ಲಿರುವ ಸುರಕ್ಷಾ ಆಸ್ಪತ್ರೆ, ಪೀಣ್ಯದ ಬಾಲಾಜಿನಗರದಲ್ಲಿರುವ ರೈಟ್ ಟೈಮ್ ಫೌಂಡೇಷನ್, ಕೆಂಗೇರಿಯ ಸಹನಾ ಫೌಂಡೇಷನ್ (ಸ್ಮೈಲ್ ಫೌಂಡೇಷನ್) ಪುನರ್ವಸತಿ ಕೇಂದ್ರ, ಕಾಮಾಕ್ಷಿಪಾಳ್ಯದ ಸಂಜೀವಿನಿ ಹೆಲ್ತ್ ಸೆಂಟರ್, ಕೋನಪ್ಪನ ಅಗ್ರಹಾರದ ಗೋವಿಂದಶೆಟ್ಟಿ ಪಾಳ್ಯದಲ್ಲಿರುವ ಇನ್ಪಿನಿಟಿ ಕ್ಲಿನಿಕ್ ಹಾಗೂ ಎಲೆಕ್ಟ್ರಾನಿಕ್ ಸಿಟಿಯ ಮುನಿಸ್ವಾಮಿ ಲೇಔಟ್‌ನಲ್ಲಿರುವ ಬಾಲಾಜಿ ಕ್ಲಿನಿಕ್‌ಗೆ ತಲಾ 50 ಸಾವಿರ ದಂಡ ಹಾಕಲಾಗಿದೆ.

ತಿಗಳರಪಾಳ್ಯದಲ್ಲಿರುವ ಶಾರದಾ ಕ್ಲಿನಿಕ್ (ಮೌಲ್ಯ ಕ್ಲಿನಿಕ್), ನಾಗಶೆಟ್ಟಿಹಳ್ಳಿಯ ರೈಲ್ವೆ ಗೇಟ್ ಬಳಿಯಿರುವ ಸ್ನೇಹ ಕ್ಲಿನಿಕ್ ಹಾಗೂ ಬಸವೇಶ್ವರ ಲೇಔಟ್‌ನಲ್ಲಿರುವ ಫಸ್ಟ್‌ಕೇರ್ ಸೂಪರ್ ಸ್ಪೆಷಾಲಿಟಿ ಹೆಲ್ತ್ ಕೇರ್ ಆ್ಯಂಡ್ ಡಯಾಗ್ನೋಸಿಸ್ ಸೆಂಟರ್‌ಗೆ ತಲಾ 25 ಸಾವಿರ ರೂ. ಮತ್ತು ಕನಕಪುರ ಮುಖ್ಯರಸ್ತೆಯಲ್ಲಿರುವ ಗಗನ ಡೆಂಟಲ್ ಕೇರ್ ಕ್ಲಿನಿಕ್‌ಗೆ 15 ಸಾವಿರ ದಂಡ ವಿಧಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲೆ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.