ವಿಕ್ರಮ ನಾಡಿಗೇರ ಧಾರವಾಡ
ಧಾರವಾಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಗಳ ಒಕ್ಕೂಟ (ಕೆಎಂಎಫ್) ದ ನಿರ್ದೇಶಕರ ಆಯ್ಕೆಯಾಗಿದ್ದು, ಇದೀಗ ಅಧ್ಯಕ್ಷ ಸ್ಥಾನದ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ. ಬಿಜೆಪಿ ಬೆಂಬಲಿತರೇ ಹೆಚ್ಚಿನ ನಿರ್ದೇಶಕರಿದ್ದರೂ ಅಧ್ಯಕ್ಷರ ಆಯ್ಕೆಗೆ ತೆರೆಮರೆಯ ಕಸರತ್ತು ಶುರುವಾಗಿದೆ.
ಹಾವೇರಿ ಜಿಲ್ಲೆ ಬೇರ್ಪಟ್ಟ ಬಳಿಕ ಧಾರವಾಡ, ಉತ್ತರ ಕನ್ನಡ ಹಾಗೂ ಗದಗ ಜಿಲ್ಲಾ ವ್ಯಾಪ್ತಿಯ ಹಾಲು ಒಕ್ಕೂಟಕ್ಕೆ ಮೊದಲ ಬಾರಿಗೆ ನಡೆದ ಚುನಾವಣೆಯಲ್ಲಿ ಒಟ್ಟು 9 ನಿರ್ದೇಶಕ ಸ್ಥಾನಕ್ಕೆ ಒಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದರೆ, ಉಳಿದ ಸ್ಥಾನಗಳಿಗೆ ಜೂ. 30ರಂದು ಚುನಾವಣೆ ನಡೆದಿತ್ತು. ನಿರ್ದೇಶಕರ ಆಯ್ಕೆಯಾದ 15 ದಿನಗಳಲ್ಲಿ ಅಧ್ಯಕ್ಷರ ಆಯ್ಕೆ ಮಾಡುವ ನಿಯಮ ಕಾರಣಕ್ಕೆ ಜು. 12ರಂದು ಅಧ್ಯಕ್ಷ ಚುನಾವಣೆಗೆ ದಿನಾಂಕ ನಿಗದಿಪಡಿಸಲಾಗಿದೆ.
ಹೀಗಾಗಿ ಅಧ್ಯಕ್ಷ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ. ಸದ್ಯದ 9 ನಿರ್ದೇಶಕ ಸ್ಥಾನಗಳ ಪೈಕಿ 7 ಜನ ಬಿಜೆಪಿ ಬೆಂಬಲಿತರು ನಿರ್ದೇಶಕರಾಗಿ ಆಯ್ಕೆಯಾಗಿದ್ದರೆ, ಕಾಂಗ್ರೆಸ್ ಬೆಂಬಲಿತರಾಗಿ ನೀಲಕಂಠ ಅಸೂಟಿ, ಹನುಮಂತಗೌಡ ಹಿರೇಗೌಡರ ಆಯ್ಕೆಯಾಗಿದ್ದರೆ. ಬಿಜೆಪಿಯಿಂದ ಶಂಕರ ಮುಗದ ಅಧ್ಯಕ್ಷ ಸ್ಥಾನದ ಆಕಾಂಯಾಗಿದ್ದರೆ, ಕಾಂಗ್ರೆಸ್ನಲ್ಲಿ ಹಿರಿಯರಾದ ನೀಲಕಂಠಪ್ಪ ಅಸೂಟಿ ಜತೆಗೆ ಹನುಮಂತಗೌಡ ಹಿರೇಗೌಡರ ಸಹ ಆಕಾಂಕ್ಷಿ. ಇದರ ಮಧ್ಯೆ ಸರ್ಕಾರ ಶಿವಲೀಲಾ ಕುಲಕರ್ಣಿ ಅವರನ್ನು ನಾಮ ನಿರ್ದೇಶಕರಾಗಿ ನೇಮಿಸಿದ್ದು, ಅವರೂ ಪೈಪೋಟಿಯಲ್ಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
9 ಜನ ನಿರ್ದೇಶಕರ ಜತೆಗೆ ಸಹಕಾರ ಸಂಗಳ ಸಂಯುಕ್ತ ನಿಬಂಧಕರು, ಪಶುಸಂಗೋಪನೆ ಇಲಾಖೆ ಉಪ ನಿರ್ದೇಶಕರು, ಕೆಎಂಎಫ್ ಬೆಂಗಳೂರಿನ ಪ್ರತಿನಿಧಿ ಹಾಗೂ ಸರ್ಕಾರದಿಂದ ನಿರ್ದೇಶನಗೊಂಡ ಒಬ್ಬರು ಸೇರಿ ಒಟ್ಟು 13 ಜನರು ಅಧ್ಯಕ್ಷರ ಆಯ್ಕೆಗೆ ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. ಈ ಪೈಕಿ 7 ಮತಗಳನ್ನು ಪಡೆಯುವವರು ಅಧ್ಯಕ್ಷ ಗಾದಿ ಏರಲಿದ್ದಾರೆ.
ಈಗಾಗಲೇ ಬಿಜೆಪಿ 7 ಸ್ಥಾನಗಳನ್ನು ಗೆದ್ದಿದೆ. ಹೀಗಾಗಿ ಅಧ್ಯಕ್ಷ ಸ್ಥಾನ ಪಡೆಯುವುದು ಸುಲಭವಾಗಿದೆ. ಕಾಂಗ್ರೆಸ್ ಅಭ್ಯರ್ಥಿಗೆ 3 ನಿರ್ದೇಕರು ಸೇರಿ ಉಳಿದ ಅಧಿಕಾರಿಗಳು ಬೆಂಬಲ ನೀಡಿದರೂ ಒಂದು ಮತ ಕಡಿಮೆ ಬೀಳಲಿದೆ. ಇದೇ ಕಾರಣಕ್ಕೆ ಬಿಜೆಪಿ ಬೆಂಬಲಿತ ನಿರ್ದೇಶಕರಿಗೆ ಗಾಳ ಹಾಕಲು ಶುರುವಾಗಿದೆ. ಈಗಾಗಲೇ 5-6 ಜನ ನಿರ್ದೇಶಕರನ್ನು ಸೆಳೆಯುವ ಪ್ರಯತ್ನವೂ ವಿಲವಾಗಿದೆ ಎನ್ನಲಾಗಿದೆ.
ಈ ಹಿಂದೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಬಿಜೆಪಿಯ ಬಸವರಾಜ ಅರಬಗೊಂಡ ಅವರನ್ನು ಕಾಂಗ್ರೆಸ್ಗೆ ಸೆಳೆದು ಅಧ್ಯಕ್ಷರನ್ನಾಗಿ ಮಾಡುವಲ್ಲಿ ವಿನಯ ಕುಲಕರ್ಣಿ ಯಶಸ್ವಿಯಾಗಿದ್ದರು. ಚುನಾವಣೆ ಹಿಂದಿನ ರಾತ್ರಿಯೇ ಕಾಂಗ್ರೆಸ್ನೊಂದಿಗೆ ಕೈ ಜೋಡಿಸಿದ್ದರಿಂದ ಬಿಜೆಪಿಗೆ ಕೆಎಂಎಫ್ ಚುಕ್ಕಾಣಿ ಹಿಡಿಯಲು ಹಿನ್ನಡೆಯಾಗಿತ್ತು. ಬಳಿಕ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಳಿ ಬಿಜೆಪಿ ಅಧಿಕಾರಕ್ಕೆ ಏರಿತ್ತು. ಹೀಗಾಗಿ ಈ ಬಾರಿಯೂ ಅಂತಹ ಪ್ರಹಸನ ನಡೆಯುವ ಸಾಧ್ಯತೆ ಇದ್ದು, ಬಿಜೆಪಿ ಎಚ್ಚರಿಕೆಯ ಹೆಜ್ಜೆ ಇಡಲು ಮುಂದಾಗಿದೆ.
ಅವಕಾಶ ಸಿಕ್ಕರೆ ಅಭಿವೃದ್ಧಿ ಕೆಲಸಒಮ್ಮೆ ಪೂರ್ಣಾವಧಿ ಹಾಗೂ ಒಂದು ಬಾರಿ 10 ತಿಂಗಳು ಅಧ್ಯಕ್ಷನಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಈ ಬಾರಿಯೂ ಆಕಾಂಕ್ಷಿ. ಪಕ್ಷದ ಹಿರಿಯರು ಅವಕಾಶ ನೀಡಿದರೆ, ರೈತರು ಸೇರಿದಂತೆ ಗ್ರಾಹಕರಿಗೆ ಅನುಕೂಲವಾಗುವಂತೆ ಅಭಿವೃದ್ಧಿ ಕೆಲಸ ಮಾಡುವ ಯೋಚನೆ ಇದೆ.*ಶಂಕರ ಮುಗದ, ಅಧ್ಯಕ್ಷ ಸ್ಥಾನದ ಆಕಾಂಕ್ಷಿ