ಕೆ.ಎಂ.ದೊಡ್ಡಿ : ಕಾಶ್ಮೀರದ ಹತ್ಯಾಕಾಂಡ ಆರೋಪಿಗಳಿಗೆ ಉಗ್ರ ಶಿಕ್ಷೆಯಾಗಲಿ ಎಂದು ಆಗ್ರಹಿಸಿ ಭಾರತಿ ನಗರದಲ್ಲಿ ಹಿಂದು ಪರ ಸಂಘಟನೆಗಳ ಕಾರ್ಯಕರ್ತರು ಪಂಜಿನ ಮೆರವಣಿಗೆ ನಡೆಸಿ, ಪಾಕ್ ವಿರುದ್ಧ ಘೋಷಣೆಗಳನ್ನು ಮೊಳಗಿಸಿದರು. ಪಟ್ಟಣದ ಭಾರತಿ ಕಾಲೇಜಿನ ಗೇಟ್ ಬಳಿ ಶುಕ್ರವಾರ ರಾತ್ರಿ ಜಮಾಯಿಸಿದ ಸಂಘಟನೆ ಕಾರ್ಯಕರ್ತರುಪಂಜು ಗಳನ್ನು ಹಿಡಿದು ಮೆರವಣಿಗೆ ಆರಂಭಿಸಿದರು. ನೂರಾರು ಜನರು ಇದಕ್ಕೆ ಸಾಥ್ ನೀಡಿದರು.ಹಿಂದುಗಳನ್ನು ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣ ಖಂಡಿಸಿದ ಪ್ರತಿಭಟನಾನಿರತರು, ಪಾಕಿಸ್ತಾನದ ವಿರುದ್ಧಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮದ್ದೂರು-ಮಳವಳ್ಳಿ ಮುಖ್ಯರಸ್ತೆ, ಮಂಡ್ಯ-ಹಲಗೂರು ಮುಖ್ಯ ರಸ್ತೆಯಲ್ಲಿ ಸಾಗಿದ ಪ್ರತಿಭಟನಾಕಾರರು ಕಾಶ್ಮೀರದಲ್ಲಿ ಗಲಭೆ ನಡೆಸಿದರೆ ಹಿಂದುಗಳು ಸುಮ್ಮನೆ ಕೂರುವುದಿಲ್ಲ ಎಂಬ ಎಚ್ಚರಿಕೆ ನೀಡಿದರು. ವಿಶ್ವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸಂಚಾರ ತಡೆದರು.ಈ ಸಂದರ್ಭ ಮಾತನಾಡಿದ ಹಿಂದುಪರ ಸಂಘಟನೆ ಮುಖಂಡ ಕೆ.ಟಿ.ನವೀನ್ ಕುಮಾರ್, ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯನ್ನು ವಿರೋಧಿಸಲು ದೇಶಕ್ಕೆ ದೇಶವೇ ಬೆಂಬಲ ನೀಡಿದೆ. ನಾವು ನಮ್ಮ ಉಳಿವಿಗಾಗಿ ಒಗ್ಗಟ್ಟು ಆಗಬೇಕು. ಇಂಥ ಸಂದರ್ಭ ಲಿಂಗಾಯತ, ಒಕ್ಕಲಿಗ, ಪರಿಶಿಷ್ಟ ಎಂದು ತಾರತಮ್ಯ ಮಾಡಿದರೆ ಫಲ ಇಲ್ಲ. ಹಿಂದುಗಳು ಒಗ್ಗೂಡದಿದ್ದರೆ ಉಳಿಗಾಲವಿಲ್ಲ ಎಂದು ಎಚ್ಚರಿಕೆ ನೀಡಿದರು.ಯುವ ಬ್ರಿಗೇಡ್ ಅಧ್ಯಕ್ಷ ಪುಟ್ಟೇಗೌಡನದೊಡ್ಡಿ ವಿಜಯಕುಮಾರ್, ಮುಖಂಡರಾದ ಮೆಡಿಕಲ್ ಗಿರೀಶ್, ಕೆ.ಟಿ. ಸುರೇಶ್, ಅಣ್ಣೂರು ವಿನು, ಸಜನ್ ಸಿಂಗ್, ಅಣ್ಣೂರು ಶಿವರಾಮು, ಮನೋಹರ್, ಮುಟ್ಟನಹಳ್ಳಿ ಚಂದ್ರು, ಜಯಕುಮಾರ್ ಮತ್ತಿತರಿದ್ದರು.