ಜಿಲ್ಲೆ

ಫೂಟ್‌ಬಾಲ್‌ನಲ್ಲಿ ಕೆಎಂಸಿಆರ್‌ಐ ಪ್ರಥಮ

ಹುಬ್ಬಳ್ಳಿ: ರಾಜೀವಗಾಂಧಿ ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯ ವತಿಯಿಂದ ಇಲ್ಲಿಯ ಕೆಎಂಸಿಆರ್‌ಐ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ದಾವಣಗೆರೆ ವಲಯ ಮಟ್ಟದ ಫೂಟ್‌ಬಾಲ್ ಪಂದ್ಯಾವಳಿಯಲ್ಲಿ ಕೆಎಂಸಿಆರ್‌ಐ ತಂಡ ಪ್ರಥಮ ಬಹುಮಾನ ಮುಡಿಗೇರಿಸಿಕೊಂಡಿತು.

ದಾವಣಗೆರೆಯ ಜೆಜೆಎಂ ಮೆಡಿಕಲ್ ದ್ವಿತೀಯ, ಚಿತ್ರದುರ್ಗದ ಎಸ್‌ಜೆಎಂ ನರ್ಸಿಂಗ್ ಕಾಲೇಜ್ ತೃತೀಯ, ಬೆಳಗಾವಿಯ ಪಿಡಿ ಭರತೇಶ ನರ್ಸಿಂಗ್ ಕಾಲೇಜ್ ನಾಲ್ಕನೇ ಸ್ಥಾನ ಪಡೆಯಿತು. ಈ ಕ್ರೀಡಾಕೂಟದಲ್ಲಿ 24 ತಂಡಗಳು ಭಾಗವಹಿಸಿದ್ದವು.

ನಿರ್ದೇಶಕ ಡಾ. ಈಶ್ವರ ಹೊಸಮನಿ, ವೈದ್ಯಕೀಯ ಅಧೀಕ್ಷಕ ಡಾ. ಈಶ್ವರ ಹಸಬಿ, ಪ್ರಾಚಾರ್ಯ ಡಾ. ಸೂರ್ಯಕಾಂತ ಕಲ್ಲೂರಾಯ, ಆರ್‌ಎಂಒ ಡಾ. ರಾಜಶೇಖರ ದ್ಯಾಬೇರಿ, ಆರ್‌ಜಿಯುಎಚ್‌ಎಸ್ ಕ್ರೀಡಾ ಕೋಆರ್ಡಿನೇಟರ್ ಮಹೇಶ ಸಿ.ಪಿ., ಡಾ. ಮಹೇಶ ಕುಮಾರ ಎಸ್., ಡಾ. ವಸಂತ ತೆಗ್ಗಿನಮನಿ, ಡಾ. ಮಂಜುನಾಥ ನೇಕಾರ, ಡಾ. ಸೀತಾರಾಮ, ಸಿಎಒ ರಮೇಶ ಕಳಸದ, ದೈಹಿಕ ಶಿಕ್ಷಣ ಶಿಕ್ಷಕ ಅರುಣ ಗೌಡೆಲ್ಲರ ಇತರರು ಇದ್ದರು.