ಮಂಗಳೂರು: ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಕೆ.ಆರ್.ಶೆಟ್ಟಿ ಹಾಗೂ ‘ಮಾಹೆ’ ದತ್ತಿ ನಿಧಿಯಿಂದ ಮಂಗಳೂರಿನ ಕೆಎಂಸಿ ಕಾಲೇಜು ಹಾಗೂ ಅಧೀನ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತ್ಯುತ್ತಮ ಶಿಕ್ಷಕೇತರ ಉದ್ಯೋಗಿಗಳಿಗೆ ನೀಡಲಾಗುವ ಪ್ರಶಸ್ತಿಗಳನ್ನು ಕಾಲೇಜಿನ ಹಿರಿಯ ಲ್ಯಾಬ್ ಟೆಕ್ನಿಶನ್ ಸಂಧ್ಯಾ ವೀರೇಶ್ವರ್, ಅತ್ತಾವರ ಕೆಎಂಸಿ ಆಸ್ಪತ್ರೆಯ ಫಿಸಿಯೋಥೆರಪಿಸ್ಟ್ ಆಶಾ ಎಸ್.ಶೆಟ್ಟಿ ಹಾಗೂ ಕೆಎಂಸಿ ಆಸ್ಪತ್ರೆ ಅಂಬೇಡ್ಕರ್ ಸರ್ಕಲ್‌ನ ಆಪರೇಶನ್ ಥಿಯೇಟರ್‌ನ ಜೂನಿಯರ್ ಅಸೋಸಿಯೇಟ್ ಗಣೇಶ್ ಬಿ. ಅವರಿಗೆ ಇತ್ತೀಚೆಗೆ ಪ್ರದಾನ ಮಾಡಲಾಯಿತು.
‘ಮಾಹೆ’ ಮಂಗಳೂರು ಕ್ಯಾಂಪಸ್ಸಿನ ಸಹಾಯಕ ಕುಲಪತಿ ಡಾ.ದಿಲೀಪ್ ಜಿ. ನಾಯಕ್, ಕೆಎಂಸಿಯ ಡೀನ್ ಡಾ.ಬಿ. ಉಣ್ಣಿಕೃಷ್ಣನ್, ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಜಾನ್ ಟಿ.ರಾಮಪುರಂ, ಉಪ ಅಧೀಕ್ಷಕ ಡಾ.ದೀಪಕ್ ಮಡಿ, ದಂತ ವೈದ್ಯಕೀಯ ಕಾಲೇಜಿನ ಡೀನ್ ಡಾ.ಅಶಿತಾ ಉಪ್ಪೂರ್, ಸಹಾಯಕ ಡೀನ್‌ಗಳಾದ ಡಾ.ಸುರೇಶ್ ಕುಮಾರ್ ಶೆಟ್ಟಿ, ಡಾ.ಪ್ರಮೋದ್ ಕುಮಾರ್, ಡಾ.ಶ್ರೀಕಲಾ ಬಾಳಿಗ, ಡಾ.ಜುನೈದ್ ಅಹಮ್ಮದ್, ಡಾ.ಆರತಿ ರಾವ್, ಹಿರಿಯ ನ್ಯೂರೋ ಸರ್ಜನ್ ಡಾ.ಮುರಳೀಧರ್ ಪೈ, ಯುರೋಲಜಿ ವಿಭಾಗ ಮುಖ್ಯಸ್ಥ ಡಾ.ಜಿ.ಜಿ.ಲಕ್ಷ್ಮಣ್ ಪ್ರಭು ಮತ್ತಿತರರು ಉಪಸ್ಥಿತರಿದ್ದರು.