ಜಿಲ್ಲೆ

ಲ್ಯಾನ್ಸೆಟ್​ ಆಯೋಗದ ಆಯುಕ್ತರಾಗಿ ಡಾ. ನವೀನ್​ ಸಾಲಿನ್ಸ್​ ನೇಮಕ

ಗೋಪಾಲಕೃಷ್ಣ ಪಾದೂರ್

ಉಡುಪಿ: ಲಂಡನ್​ ಲ್ಯಾನ್ಸೆಟ್​ ಆಯೋಗ ಆಯುಕ್ತರಾಗಿ ಮಣಿಪಾಲದ ಕಸ್ತೂರ್ಬಾ ವೈದ್ಯಕಿಯ ಕಾಲೇಜಿನಲ್ಲಿ ಉಪಶಾಮಕ ಔಷಧ ವಿಭಾಗದ ಮುಖ್ಯಸ್ಥ ಹಾಗೂ ಸಮಗ್ರ ಕ್ಯಾನ್ಸರ್​ ಆರೈಕೆ ಕೇಂದ್ರದ ಸಂಯೋಜಕ ಡಾ. ನವೀನ್​ ಸಾಲಿನ್ಸ್​ ನೇಮಕಗೊಂಡಿದ್ದಾರೆ.

ಮುಂದಿನ ಎರಡು ವರ್ಷಗಳಲ್ಲಿ ಡಾ.ಸಾಲೀನ್ಸ್​ ನೇತೃತ್ವದ ತಂಡವು ಕ್ಯಾನ್ಸರ್​ ಸಂಶೋಧನೆ, ಶಿಕ್ಷಣ ಮತ್ತು ಕ್ಲಿನಿಕಲ್​ ಕೇರ್​ಗೆ ಸಂಪನ್ಮೂಲ ಹಂಚಿಕೆ, ವಾಣಿಜ್ಯ ಅಂಶಗಳನ್ನು ಪರಿಶೀಲಿಸಿ ಕಾರ್ಯತಂತ್ರದ ವಿಧಾನಗಳನ್ನು ರೂಪಿಸಲಿದೆ. ಆಯೋಗವು ಯುರೋಪ್​, ಏಷ್ಯಾ, ಆಫ್ರಿಕಾ, ದಕ್ಷಿಣ ಅಮೇರಿಕಾ ಮತ್ತು ಓಷಿಯಾನಿಯಾದಿಂದ ವಿಶೇಷ ತಜ್ಞರನ್ನು ಸದಸ್ಯರನ್ನಾಗಿ ಹೊಂದಿದೆ.

ಸಾಲೀನ್ಸ್​ ಅವರು, ನೆದರ್​ಲ್ಯಾಂಡ್ಸ್​ನ ರೋಟರ್​ಡ್ಯಾಮ್​ನಲ್ಲಿರುವ ಯುರೋಪಿಯನ್​ ಅಸೋಸಿಯೇಶನ್​ ಆಫ್​ ಪ್ಯಾಲಿಯೇಟಿವ್​ನಿಂದ ಪ್ರತಿಷ್ಠಿತ ಅಂತರಾಷ್ಟ್ರೀಯ ಉಪಶಾಮಕ ಆರೈಕೆ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಕ್ಯಾನ್ಸರ್​ನಿಂದ ಆಗಿರುವ ಜಾಗತಿಕ ಆರೋಗ್ಯದ ಹೊರೆಯನ್ನು ಪರಿಹರಿಸುವಲ್ಲಿ ಹಾಗೂ ಅಂತರರಾಷ್ಟ್ರೀಯ ಪ್ರಯತ್ನಗಳನ್ನು ಮುನ್ನಡೆಸಲು ಇದು ಭಾರತಕ್ಕೆ ಒಂದು ಅನನ್ಯ ಅವಕಾಶವನ್ನು ಒದಗಿಸುತ್ತದೆ.