ಜಿಲ್ಲೆ

ಕ್ಯಾನ್ಸರ್​ ರೋಗಪತ್ತೆಯಲ್ಲಿ ಕೆಎಲ್​ಇ ಸಾಧನೆ

ವಿಠ್ಠಲ ಹಣಮಂತ ಬಾಳೇಕುಂದ್ರಿ

ಬೆಳಗಾವಿ: ಆರೋಗ್ಯ ಕ್ಷೇತ್ರದಲ್ಲಿ ಹೊಸ ಸಂಶೋಧನೆಗಳ ಮೂಲಕ ಖ್ಯಾತಿ ಪಡೆದಿರುವ ಕೆಎಲ್​ಇ ಅಕಾಡೆಮಿ ಆಫ್​ ಹೈಯರ್​ ಎಜುಕೇಷನ್​ ಆ್ಯಂಡ್​ ರಿಸರ್ಚ್​ನ ಡಾ. ಪ್ರಭಾಕರ ಕೋರೆ ಬೇಸಿನ್​ ಸೈನ್ಸ್​ ಸಂಶೋಧನಾ ಕೇಂದ್ರವು ಕ್ಯಾನ್ಸರ್​ ರೋಗಪತ್ತೆ ಕಾರ್ಯದಲ್ಲಿ ಮಹತ್ತರ ಸಾಧನೆ ಮಾಡಿದೆ. ಈ ಕೇಂದ್ರದ ವಿಾನಿ ಡಾ. ಶ್ರೀಧರ ಗಾನೆ ಅಮೆರಿಕದ ಫಿಲಡೆಲ್ಫಿಯಾದ ಥಾಮಸ್​ ಜೆಫರಸನ್​ ವಿಶ್ವವಿದ್ಯಾಲಯದಲ್ಲಿ ವಿಶೇಷ ತರಬೇತಿ ಪಡೆದಿದ್ದಾರೆ.

ಕಾನ್ಫೊಕಾಲ್​ ಫ್ಲೊರೊಸೆನ್ಸ್​ ಪ್ರಾಯೋಗಿಕ ತರಬೇತಿಯಲ್ಲಿ ಟಿಪಿ4303 ಸೂ್ಮಾಣು ಬಳಸಿ ಪ್ರಾಸ್ಟೇಟ್​ ಕ್ಯಾನ್ಸರ್​ ರೋಗಪತ್ತೆ ಸರಳ ವಿಧಾನ ತೋರ್ಪಡಿಸಿದ್ದಾರೆ. ಇದು ರೋಗಪತ್ತೆಯಲ್ಲಿ ಹೊಸ ಭರವಸೆ ಮೂಡಿಸಿದೆ.

ಭಾರತೀಯ ಜನಸಂಖ್ಯೆಗೆ ಅನುಗುಣವಾಗಿ ಪರಿಚಲನೆಗೊಳ್ಳುವ ಗಡ್ಡೆಕೋಶ ಡಿಎನ್​ಎ ಕಂಡುಹಿಡಿಯಲು ಏಕಕೋಶ ವಿಶ್ಲೇಷಣೆ ನೀಡಿದ್ದಾರೆ. ಈ ವಿಧಾನ ಪ್ರಾಸ್ಟೇಟ್​, ಅಂಡಾಶಯ ಹಾಗೂ ಎಂಡೋಮೆಟ್ರಿಯಲ್​ ಕ್ಯಾನ್ಸರ್​ ಕಂಡುಹಿಡಿಯುವಲ್ಲಿ ಸಹಕಾರಿಯಾಗಲಿದ್ದು, ಅತ್ಯಂತ ಪರಿಣಾಮಕಾರಿ, ರೋಗಿಸ್ನೇಹಿಯಾಗಿದೆ. ಆರಂಭಿಕ ಕ್ಯಾನ್ಸರ್​ ಪತ್ತೆ ಮಾಡುವಲ್ಲಿ ಸಹಕಾರಿಯಾಗಿದ್ದು, ಚಿಕಿತ್ಸಾ ತಂತ್ರಾನ ಅಭಿವೃದ್ಧಿಯಲ್ಲಿ ಅಪಾರ ಭರವಸೆ ಹೊಂದಿದೆ.

ಥಾಮಸ್​ ಜೆಫರ್ಸನ್​ ವಿಶ್ವವಿದ್ಯಾಲಯದ ವಿಾನಿ ಡಾ. ರಿಚರ್ಡ್​ ಡರ್ಮನ್​, ಡಾ. ಲಿಯೊನಾರ್ಡ್​ ಗೊಮೆಲ್ಲಾ, ಡಾ. ಮ್ಯಾಥ್ಯೂ ಠಾಕೂರ್​ ಮತ್ತು ಪಾರ್ಥ ಲಲಾಕಿಯಾ, ಜೆಎನ್​ಎಂಸಿ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಎಸ್​.ಎಸ್​.ಗೌಡರ, ಡಾ.ಆರ್​.ಬಿ.ನೇರ್ಲಿ, ಡಾ.ರಮೇಶ ಪರಾಂಜಪೆ ಸಂಶೋಧನೆಗೆ ಸಹಕಾರ ನೀಡಿದ್ದಾರೆ ಎಂದು ವಿಾನಿ ಡಾ.ಶ್ರೀಧರ ಗಾನೆ ತಿಳಿಸಿದ್ದಾರೆ.

ಸಂಶೋಧನೆಗೈದ ಡಾ. ಶ್ರೀಧರ ಗಾನೆ ಅವರನ್ನು ಕೆಎಲ್​ಇ ಕಾರ್ಯಾಧ್ಯ ಡಾ. ಪ್ರಭಾಕರ ಕೋರೆ, ಕಾಹೆರ ಉಪಕುಲಪತಿ ಡಾ. ನಿತಿನ್​ ಗಂಗಾನೆ, ಕುಲಸಚಿವ ಡಾ. ಎಂ. ಎಸ್​. ಗಣಾಚಾರಿ ಅಭಿನಂದಿಸಿದ್ದಾರೆ.