ಜಿಲ್ಲೆ

ಜ್ಞಾನದ ದಾಸೋಹ ಹಂಚಿಕೆಯಾಗಲಿ: ವಿಶ್ವನಾಥ ಜಿ

Gadag - Shivanand Hiremath

ಗದಗ : ಜಗತ್ತಿನಲ್ಲಿ ಜ್ಞಾನಕ್ಕಿಂತ ಮಿಗಿಲಾದ ವಸ್ತು ಮತ್ತೂಂದಿಲ್ಲ, ಅದನ್ನು ದಾಸೋಹದ ರೂಪದಲ್ಲಿ ಹಂಚಿಕೊಳ್ಳುವುದಕ್ಕಿಂತ ಮಹತ್ತರ ಕಾರ್ಯ ಮತ್ತೂಂದಿಲ್ಲ ಎಂದು ಜೆಟಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ವಿಶ್ವನಾಥ ಜಿ. ಹೇಳಿದರು. 

ಸಮೀಪದ ಹಾತಲಗೇರಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ  ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ, ಕೆ.ಎಲ್.ಇ ಸಂಸ್ಥೆಯ ಎಸ್.ಎ.‌ಮಾನ್ವಿ ಕಾನೂನು ಮಹಾವಿದ್ಯಾಲಯ ಹಾಗೂ ಗ್ರಾಮ ಪಂಚಾಯತಿ ಇವರ ಸಂಯುಕ್ತಾಶ್ರಯದಲ್ಲಿ ಜರುಗಿದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಕಾನೂನು ಅರಿವು ನೆರವಿಗಾಗಿ ಯುವಜನತೆ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. 

ಹಲವಾರು ರೂಪದ ದಾಸೋಹಗಳು ಚಾಲ್ತಿಯಲ್ಲಿದ್ದು, ಅದರಲ್ಲಿ ಜ್ಞಾನ ದಾಸೋಹವೇ ಅತೀ ಶ್ರೇಷ್ಠವಾದದ್ದು. ಜ್ಞಾನ ಅವ್ಯಕ್ತ ವ್ಯಕ್ತಿಯನ್ನು ಪರಿಪೂರ್ಣ ವ್ಯಕ್ತಿಯನ್ನಾಗಿ ಮಾಡುತ್ತದೆ. ಹೀಗಾಗಿ ಜ್ಞಾನ ದಾಸೋಹ ಎಲ್ಲ ಕಾಲಕ್ಕೂ ಸಲ್ಲುವಂತಹದ್ದಾಗಿದೆ. ವಿದ್ಯಾರ್ಥಿಗಳನ್ನು ಪುಸ್ತಕದ ಜ್ಞಾನದ ಜೊತೆಗೆ ಜನರ ಸಂಪರ್ಕ ಹೊಂದುವುದು ಮನುಷ್ಯನನ್ನು ಬಹುದೊಡ್ಡ ಮಟ್ಟಕ್ಕೆ ತಗೆದುಕೊಂಡು ಹೋಗುತ್ತದೆ. ಚುನಾವಣೆಯಲ್ಲಿ ಕೇವಲ ಜನರ ಸೇವೆಯನ್ನು ಮಾಡುತ್ತೇವೆ‌ ಎಂಬುದು ಕೇವಲ ನಾಟಕವಾಗಿರುತ್ತದೆ. ಜನರ ಸೇವೆ ಮಾಡಲು ಅಧಿಕಾರಬೇಕಾಗಿಲ್ಲ.ಯಾವ ರೂಪದಲ್ಲಿಯಾದರೂ ಜನರ‌ ಸೇವೆಯನ್ನು‌ ಮಾಡಿ ನೆಮ್ಮದಿಯನ್ನು‌ ಪಡೆಯಬಹುದು. ನಾವು ಕಲಿತ ವಿದ್ಯೆಯಿಂದ ಜನರ ಕಷ್ಟಗಳಿಗೆ ಪರಿಹಾರ ಒದಗಿಸುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಜ್ಞಾನದ ದಾಸೋಹ ಹಂಚಿಕೆಯಾಗಿಬೇಕು. ಜ್ಞಾನ ಕೇವಲ ಹಣ ಸಂಪಾದನೆಗೆ ಬಳಕೆಯಾಗದೆ ಜನರ ಕಲ್ಯಾಣಕ್ಕೆ ಮತ್ತು ನಾಗರಿಕರ ಕಷ್ಟಗಳಿಗೆ ಸ್ಪಂದಿಸುವ ಹೃದಯವನ್ನು ಹೊಂದಬೇಕು ಎಂದರು. 

ಉಪನ್ಯಾಸಕ ಡಾ. ವಿಜಯ ಮುರದಂಡೆ ಮಾತನಾಡಿ, ವಿದ್ಯಾರ್ಥಿಗಳ ಜೀವನ ಬಂಗಾರ ಜೀವನವಾಗಿದೆ. ಯಶಸ್ಸು ಪಡೆಯಲು ಶಿಸ್ತು ಮತ್ತು ಸಮಯ ಪಾಲನೆ ಮಾಡಬೇಕು.ಜೀವನದಲ್ಲಿ ಶಿಸ್ತು ಮತ್ತು ಸಮಯಕ್ಕೆ ತನ್ನದೇ ಆದಂತ ಪ್ರಾಮುಖ್ಯತೆ ಇದೆ. ಅದನ್ನು ನೀಡಲೇಬೇಕು. ಶಿಸ್ತು ಮತ್ತು ಸಮಯದ ಮಹತ್ವವನ್ನು ಯಾರು ಸರಿಯಾಗಿ ತಿಳಿದಿರುತ್ತಾರೆಯೋ ಅವರು ಜೀವನದಲ್ಲಿ ಸಾಧನೆಯ ಉತ್ತುಂಗಕ್ಕೆ ಹೋಗುತ್ತಾರೆ. ಅಮೂಲ್ಯ ಸಮಯದ ಸದ್ಭಳಕೆ ಹಾಗೂ ಸಮಯವನ್ನು ನ್ಯಾಯೋಜಿತವಾಗಿ ಉಪಯೋಗಿಸಿಕೊಳ್ಳುವ ಚಾಣಾಕ್ಷತೆ ಹೊಂದಿರುತ್ತಾನೆ ಎಂದರು.

ಉಪನ್ಯಾಸಕಿ ಡಾ. ಜ್ಯೋತಿ‌ ಸಿ.ವಿ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಬಂದ ಅವಕಾಶಗಳನ್ನು ಚಿಕ್ಕದು ದೊಡ್ಡದೆಂದು ನೋಡದೆ ಬಂದ ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು.‌ ಎನ್.ಎಸ್.ಎಸ್.ಎಂದರೆ ನಿಸ್ವಾರ್ಥ ಸೇವಾ ಯೋಜನೆವಾಗಿದೆ. ಅದರಿಂದ ಸಿಗುವ ವ್ಯಕ್ತಿತ್ವ ವಿಕಸನ ಕೌಶಲ್ಯಗಳು ನಮ್ಮ‌ ಮುಂದಿಮ ಜೀವನದಲ್ಲಿ ಉಪಯೋಗಬೇಕು ಬರುತ್ತವೆ ಎಂದರು.

ಉಪನ್ಯಾಸಕರಾದ ಎಸ್.ಟಿ. ಮೂರಶಿಳ್ಳಿನ ಅಧ್ಯಕ್ಷತೆ ವಹಸಿ ಮಾತನಾಡಿ,  ಎನ್.ಎಸ್.ಎಸ್.‌ಶಿಬಿರಗಳು ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯ ಪಾಲನೆ ಮತ್ತು‌ನಾಯಕತ್ವ ಗುಣಗಳನ್ನು ಬೆಳೆಸುವ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳು ಕಳೆದ ೬ದಿನಗಳಿಂದ ಗ್ರಾಮದಲ್ಲಿ ಅನೇಕ ಚಟುವಟಿಕೆಗಳನ್ನು ಹಮ್ಮಿಕೊಂಡು ಜನರಲ್ಲಿ ಕಾನೂನು ತಿಳಿವಳಿಕೆ ಮೂಡಿಸುವ ಕಾರ್ಯವನ್ನು ಕೈಗೊಂಡು ಜನರಲ್ಲಿ ಜಾಗೃತಿಯನ್ನು ಮೂಡಿಸಿದ್ದಾರೆ‌ ಎಂದರು.

ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಡಾ. ಸಿ.ಬಿ. ರಣಗಟ್ಟಿಮಠ ಮಾತನಾಡಿ, ಕಳೆದ ೬ ದಿನಗಳಿಂದ ರಾಷ್ಟ್ರೀಯ ಸೇವಾ ಯೋಜನಾ ಶಿಬಿರದಲ್ಲಿ ಜರುಗಿದ ಎಲ್ಲಾ ಚಟುವಟಿಕೆ ಹಾಗೂ ಕಾರ್ಯಕ್ರಮಗಳ ಬಗ್ಗೆ ಸಂಕ್ಷಿಪ್ತವಾಗಿ ವರದಿಯನ್ನು ವಾಚನ ಮಾಡಿದರು.‌

ಈವೇಳೆ ಎನ್.ಎಸ್.ಎಸ್. ಶಿಬಿರಾರ್ಥಿಗಳಿಂದ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಡಾ.ಸಿ.ಬಿ.‌ರಣಗಟ್ಟಿಮಠ ಅವರಿಗೆ‌ ಸನ್ಮಾನ ಸಮಾರಂಭ ಜರುಗಿತು.ನಂತರ ಶಿಬಿರಾರ್ಥಿಗಳು ಅನಿಸಿಕೆಗಳನ್ನು‌ ಹಂಚಿಕೆ‌ ಮಾಡಿಕೊಂಡರು.‌ಸಾಹಿತಿ ಮಲ್ಲಿಕಾರ್ಜುನ ಪೂಜಾರ ಮಾತನಾಡಿದರು. ಉಪನ್ಯಾಸಕ ಶರತಕುಮಾರ ದರಬಾರ,

ಗ್ರಾ.ಪಂ ಮಾಜಿ‌ ಅಧ್ಯಕ್ಷ ಎಂ.ಎನ್.‌ಜಾಲಮ್ಮನವರ ಸೇರಿದಂತೆ ಇತರರಿದ್ದರು.‌ ಸುನೀಲಕುಮಾರ ಮಾಡಲಗೇರಿ ಪ್ರಾರ್ಥಿಸಿದರುಶಿಬಿರಾರ್ಥಿ ಬಸವರಾಜ ಕರಡಿ‌ ಸ್ವಾಗತಿಸಿದರು. ಶಿಬಿರಾರ್ಥಿ ಮಹಮ್ಮದಯೂಸುಫ್ ನದಾಫ ವಂದಿಸಿದರು.‌ಶಿಬಿರಾರ್ಥಿ ಚನ್ನಬಸಪ್ಪ ಮೆಳ್ಳೀಗೇರಿ‌ ನಿರೂಪಿಸಿದರು.