ಜಿಲ್ಲೆ

ಮನ ಸೆಳೆದ ಸುರ ಔರ್ ತಾಲ ಸಾಧನಾ ಸಂಗೀತ ಕಾರ್ಯಕ್ರಮ

ಬೆಳಗಾವಿ: ಕೆಎಲ್‌ಇ ಸಂಗೀತ ಶಾಲೆ ವತಿಯಿಂದ ನಗರದ ಜೆಎನ್‌ಎಂಸಿ ಆವರಣದ ಕೆಎಲ್ಇ ಕನ್ವೆನ್ಷನ್ ಸೆಂಟರ್‌ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುರ್ ಔರ್ ತಾಲ್ ಸಂಗೀತ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.

ಸಂತೋಷ ಕುಲಕರ್ಣಿ ತಬಲಾ ಸೋಲೋ ನಡೆಸಿಕೊಟ್ಟರು. ನಂತರ ಅಂಬರ ಮಿರಿಂಕರ ಹಿಂದುಸ್ತಾನಿ ಶಾಸೀಯ ಸಂಗೀತ ಪ್ರಸ್ತುತ ಪಡಿಸಿದರು. ವಿದ್ಯಾರ್ಥಿಗಳಿಗೆ ಹೊಸ ರಾಗ ಪರಿಚಯಿಸಲಾಯಿತು. ಸಂಗೀತ ಕಾರ್ಯಕ್ರಮಕ್ಕೆ ಯಾದವೇಂದ್ರ ಪೂಜಾರಿ, ರಾಹುಲ ಮಂಡೂಲ್ಕರ, ಯೋಗೇಶ ರಾಮದಾಸ, ನಿತಿನ ಸುತಾರ ಸಾಥ್ ನೀಡಿದರು.

ಸಂಗೀತ ಮಹಾವಿದ್ಯಾಲಯದ ಸಂಯೋಜಕ ಡಾ.ರಾಜೇಂದ್ರ ಭಾಂದನಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಭಾಗದ ಮುಖ್ಯಸ್ಥ ಪಂ. ರಾಜಾರಾಮ್ ಅಂಬರಡೆಕರ ಸ್ವಾಗತಿಸಿದರು. ಪ್ರಾಧ್ಯಾಪಕಿ ಡಾ.ಸುನೀತಾ ಪಾಟೀಲ ನಿರೂಪಿಸಿದರು. ಡಾ.ದುರ್ಗಾ ನಾಡಕರ್ಣಿ ಮತ್ತು ಸಂಗೀತಾ ಕುಲಕರ್ಣಿ ಪರಿಚಯಿಸಿದರು.