ಜಿಲ್ಲೆ

ಕೆಎಲ್​ಇ ಐಟಿ ಐಡಿಯಾಕ್ಕೆ ಅನುದಾನ

Dharwada - Basavaraj Idli

ಹುಬ್ಬಳ್ಳಿ: ಭಾರತ ಸರ್ಕಾರದ ಎಂಎಸ್ಎಂಇ ವತಿಯಿಂದ ಏರ್ಪಡಿಸಿದ್ದ ಎಂಎಸ್ಎಂಇ ಐಡಿಯಾ ಹ್ಯಾಕ್ ಥಾನ್ 4.0 ಕಾರ್ಯಕ್ರಮದಲ್ಲಿ ಇಲ್ಲಿಯ ಕೆಎಲ್ಇ ಐಟಿಯು ಎರಡು ಆವಿಷ್ಕಾರಕ ಯೋಜನೆಗಳಿಗೆ ಅನುದಾನ ಪಡೆಯುವಲ್ಲಿ ಯಶಸ್ವಿಯಾಗಿವೆ.

ಈ ಮೂಲಕ ಕೆಎಲ್ಇ ಸಂಸ್ಥೆಯು ತನ್ನ ಸಂಶೋಧನಾ ವ್ಯವಸ್ಥೆ ಹಾಗೂ ಉದ್ಯಮಶೀಲತೆ ಉತ್ಸಾಹವನ್ನು ಮತ್ತೊಮ್ಮೆ ಪರಿಚಯ ಮಾಡಿದೆ.
ಪರಿಣಾಮಕಾರಿ ಐಡಿಯಾಗಳನ್ನು ಬೆಳೆಸುವ ಪ್ರಮುಖ ಕೇಂದ್ರವಾಗಿರುವ ಕೆಎಲ್ಇ ಐಟಿ ಸಂಸ್ಥೆಯ ಪ್ರಾಚಾರ್ಯ ಡಾ. ಮನು ಟಿ.ಎಂ. ಹಾಗೂ ಡಾ. ಶ್ರೀಧರ ಅಳ್ಳಗಿ ನೇತೃತ್ವದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಪ್ರಸ್ತುತ ಪಡಿಸಿದ ಎರಡು ಪ್ರಮುಖ ಐಡಿಯಾಗಳು ಅನುದಾನಕ್ಕೆ ಪಾತ್ರವಾಗಿವೆ.

ವಾಸ್ತವ ಜಗತ್ತಿನ ಸವಾಲುಗಳಿಗೆ ತಂತ್ರಜ್ಞಾನದ ಪರಿಹಾರಗಳನ್ನು ಕಂಡುಕೊಳ್ಳಲು ಈ ಐಡಿಯಾಗಳು ನೆರವಾಗಲಿವೆ. ಒಟ್ಟು 20 ಲಕ್ಷ ರೂ. ಅನುದಾನ ಲಭ್ಯವಾಗಲಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಇಂತಹ ಸಾಧನೆ ಮಾಡಿದ ಏಕೈಕ ಸಂಸ್ಥೆಯಾಗಿ ಕೆಎಲ್ಇ ಐಟಿ ಹೊರಹೊಮ್ಮಿದೆ.