ಬೆಳಗಾವಿ: ಈಚೆಗೆ ಅಮೆರಿಕಾದ ವಿಸ್ಕಾನ್ಸಿನ್-ಲಾ ಕ್ರೋಸ್ ವಿಶ್ವವಿದ್ಯಾಲಯದಲ್ಲಿ (ಯುಡಬ್ಲುಎಲ್) ಆಯೋಜಿಸಿದ್ದ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮದಲ್ಲಿ ನಗರದ ಕೆಎಲ್‌ಇ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ (ಕಾಹೆರ್)ಯ ಘಟಕವಾದ ಕೆಎಲ್‌ಇ ಭೌತಚಿಕಿತ್ಸಾ ಸಂಸ್ಥೆಯ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಕಾಹೆರ್ ಮತ್ತು ಯುಡಬ್ಲುಎಲ್ ನಡುವಿನ ತಿಳಿವಳಿಕೆ ಒಪ್ಪಂದದ ಅಡಿಯಲ್ಲಿ ಶೆಕ್ಷಣಿಕ ವಿನಿಮಯ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳಾದ ಡಾ. ಸುಪ್ರಿಯೋ ಸರ್ಕಾರ, ಡಾ. ಶ್ರೇಯಸಿ ಘಾಟಗೆ ಮತ್ತು ಡಾ. ಅನುರಾಧ ಪರಮಶೆಟ್ಟಿ ಅವರು ಕೆ.ಎಲ್.ಇ. ಭೌತಚಿಕಿತ್ಸಾ ಸಂಸ್ಥೆಯನ್ನು ಪ್ರತಿನಿಸಿದ್ದಕ್ಕಾಗಿ ವಿದ್ಯಾರ್ಥಿಗಳಿಗೆ ಬೋಧನಾ ಸಿಬ್ಬಂದಿ ಅಭಿನಂದಿಸಿದ್ದಾರೆ.