ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಪ್ರಸ್ತುತತ ರಾಜಕಾರಣದಲ್ಲಿ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಪಕ್ಷಾತೀತವಾಗಿ ಪ್ರಭಾವ ಇಟ್ಟುಕೊಂಡಿರುವ ವ್ಯಕ್ತಿ ಎಂದು ನಿವೃತ್ತ ಐಎಎಸ್ ಅಧಿಕಾರಿಎಂ.ಜಿ.ಹಿರೇಮಠ ಬಣ್ಣಿಸಿದರು.
ನೆಹರುನಗರದ ಕನ್ನಡ ಭವನದಲ್ಲಿ ಶನಿವಾರ ಕೆಎಲ್ಇ ಸಂಸ್ಥೆಯ ನಿವೃತ್ತಿ , ಅಜೀವ ಸದಸ್ಯರು,ಪ್ರಾಚಾರ್ಯರು,ಪ್ರಾಧ್ಯಾಪಕರು, ಅಧ್ಯಾಪಕರು, ಸಿಬ್ಬಂದಿ ಹಾಗೂ ಸಂಘ ಸಂಸ್ಥೆಗಳು, ಕನ್ನಡ ಆಡಳಿತ ಮಂಡಳಿ ಪದಾಧಿಕಾರಿಗಳುಮತ್ತುನಿರ್ದೇಶಕರು, ಆಪ್ತಮಿತ್ರರು ಹಮ್ಮಿಕೊಂಡಿದ್ದ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರಿಗೆ ಅಭಿನಂದನೆ ಸಮಾರಂಭದಲ್ಲಿ ಮಾತನಾಡಿದ ಅವರು, ಸಾರ್ವಜನಿಕ ಜೀವನದಲ್ಲಿ ಸಂಬಂಧಗಳನ್ನು ಬಹಳ ಸಮರ್ಥವಾಗಿ ನಿಭಾಯಿಸಿಕೊಂಡು ಬಂದಿದ್ದಾರೆ. ಹಾಗಾಗಿಯೇ ಕೆಎಲ್ಇ ಇವತ್ತು ಹೆಮ್ಮರವಾಗಿ ಬೆಳೆದು ನಿಂತಿದೆ ಎಂದರಿ.
ಕೆಎಲ್ಇ ಸಂಸ್ಥೆಯಿಂದ ನನ್ನ ವಿದ್ಯಾಭಾಸ ಆರಂಭವಾಯಿತು.ನನ್ನ ಸಾಧನೆಗೆ ಕೆಎಲ್ಇ ಸಂಸ್ಥೆಯ ತಳಹದಿ. ಅದನ್ನು ಯಾವತ್ತು ಮರೆಯಲ್ಲ. ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಒಳ್ಳೆಯ ಕೆಲಸ ಮಾಡಲು ಪ್ರೋತ್ಸಾಹಿಸಿದರು. ಅವರ ನಿರೀಕ್ಷೆ ಯಂತೆ ಕಾರ್ಯನಿರ್ವಹಿಸಿದ ತೃಪ್ತಿ ನನಗಿದೆ ಎಂದರು.
ನಾನು ಜಿಲ್ಲಾಧಿಕಾರಿ ಆಗಿದ್ದ ಸಂದರ್ಭದಲ್ಲಿ ಕಾಲೇಜು ರಸ್ತೆಗೆ ಲಿಂಗರಾಜು ಹೆಸರು ನಾಮಕರಣ ಮಾಡಲು ಕೋರೆ ಪತ್ರ ಬರೆದಿದ್ದರು. ಆ ಹಿನ್ನೆಲೆ ನಿಯಮಗಳಂತೆ ಹೆಸರುನಾಮಕರಣ ಮಾಡಲಾಯಿತು.ಹತ್ತು ಹಲವಾರು ಕೆಲಸಗಳನ್ನು ನಮ್ಮಿಂದ ಕಡೆ ಮಾಡಿಸಿದ್ದರು. ಬೆಳಗಾವಿ ನಗರದಲ್ಲಿ ಲಿಂಗಾಯತ ಸಮಾಜದ ಹೆಣ್ಣುಮಕ್ಕಳಿಗೆ ವಸತಿನಿಲಯಕ್ಕೆ ಡಾ. ಕೋರೆ ಅವರು ಸಾಕಷ್ಟು ಪ್ರಯತ್ನಪಟ್ಟಿದ್ದಾರೆ ಎಂದರು.