ಬೆಳಗಾವಿ: ಇಲ್ಲಿನ ಕೆಎಲ್‌ಇ ಸಂಸ್ಥೆಯು ಕಾಹೆರ್ ಜೆಎನ್‌ಎಂಸಿ ಕಾಲೇಜು ಸಭಾಂಗಣದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ರೋಗಶಾಸ್ತ್ರ ಸಮ್ಮೇಳನ ಯಶಸ್ವಿಯಾಗಿ ಜರುಗಿತು. ದೇಶದ ವಿವಿಧ ಭಾಗಗಳಿಂದ 300ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಿದ್ದರು.
ನಗರದ ಕೆಎಲ್‌ಇ ಜೆಎನ್‌ಎಂಸಿ ಕಾಲೇಜು ಸಭಾಂಗಣದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ರೋಗಶಾಸ್ತ್ರ ಸಮ್ಮೇಳನಕ್ಕೆ ಕೆಎಲ್‌ಇ ಸಂಸ್ಥೆಯ ಕಾಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಉದ್ಘಾಟಿಸಿದರು. ಡಾ.ವಿ.ಎಸ್.ಸಾಧುನವರ, ಕಾಹೆರ್ ಉಪಕುಲಪತಿ ಡಾ. ನಿತಿನ್ ಎಸ್.ಗಂಗನೆ, ಪ್ರಾಂಶುಪಾಲ ಡಾ.ವಿ.ಎಸ್.ಮಹಾಂತಶೆಟ್ಟಿ, ಡಾ.ಬಕುಲ್ ದಾರಾನಾಳ, ಡಾ.ನೀರಗ್ ಝಾಲಾ, ಡಾ.ಫ್ರಾನಿಸ್ಕೊ ಕೌಟೊ, ಡಾ.ಉಷಾ ಕಿಣಿ, ಡಾ. ಡಿ.ಕೆ.ಮಿಶ್ರಾ, ಡಾ.ವಿಜಯಲಕ್ಷ್ಮೀ ಧೋರಿಗೋಳ ಇತರರಿದ್ದರು.
ಇದಕ್ಕೂ ಮೊದಲು ಪ್ರಖ್ಯಾತ ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ರೋಗಶಾಸ್ತ್ರಜ್ಞರು ಉಪನ್ಯಾಸಗಳು ಮತ್ತು ಸ್ಮರಣೀಯ ಪ್ರಕರಣಗಳನ್ನು ನೀಡಿದರು.15 ವಿವಿಧ ರಾಜ್ಯಗಳಿಂದ ಭಾರತದ ಸುಮಾರು 300 ಪ್ರತಿನಿಧಿಗಳು ಸಮ್ಮೇಳನಕ್ಕೆ ನೋಂದಾಯಿಸಿಕೊಂಡಿದ್ದರು ಮತ್ತು 145 ಪೋಸ್ಟರ್‌ಗಳನ್ನು ಪ್ರಸ್ತುತಪಡಿಸಲಾಯಿತು ಎಂದು ಆಯೋಜಕರು ತಿಳಿಸಿದ್ದಾರೆ.