ಬೆಳಗಾವಿ: ಇಲ್ಲಿನ ಶಹಾಪುರ ಕೆಎಲ್‌ಇ ಆಯುರ್ವೇದ ಆಸ್ಪತ್ರೆಯಲ್ಲಿ ಜು.13ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 1.30ಗಂಯವರೆಗೆ ಮತ್ತು ಮಧ್ಯಾಹ್ನ 2.30ರಿಂದ ಸಂಜೆ 5 ಗಂಟೆಯವರೆಗೆ ಉಚಿತ ಹೃದಯ ರೋಗ ತಪಾಸಣೆ ಶಿಬಿರ ಜರುಗಲಿದೆ.
ಈ ಶಿಬಿರದಲ್ಲಿ ರಕ್ತದೊತ್ತಡ (ಬಿಪಿ), ಕೊಬ್ಬು ಹೃದಯಘಾತ, ಹೃದಯ ರಕ್ತನಾಳ ತೊಂದರೆ ಮುಂದಾರ ರೋಗಗಳಿಗೆ ತಪಾಸಣೆ ಮಾಡಲಾಗುವುದು. ತೈಜ್ಞ ವೈದ್ಯರು ತಪಾಸಣೆ ನಡೆಸಿ ಸೂಕ್ತ ಸಲಹೆ ನೀಡಲಿದ್ದಾರೆ. ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಆಸ್ಪತ್ರೆಯ ವೈದ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.