ಹುಬ್ಬಳ್ಳಿ : ಕೃತಕ ಬುದ್ಧಿಮತ್ತೆಯ ಸಹಾಯದೊಂದಿಗೆ ವೈದ್ಯಕೀಯ ತಂತ್ರಜ್ಞಾನದಲ್ಲಿನ ಆವಿಷ್ಕಾರಗಳು ಅದ್ಭುತ ಪ್ರಗತಿ ಕಾಣುತ್ತಿದ್ದು, ವಿಶೇಷವಾಗಿ ನೇತ್ರಶಾಸ್ತ್ರ ಮತ್ತು ಸ್ತನ ಕ್ಯಾನ್ಸರ್ನ ಪತ್ತೆ ಮತ್ತು ಮುನ್ಸೂಚನೆ ನೀಡುವಲ್ಲಿ ಸಂಶೋಧನೆಗಳು ಮಹತ್ತರ ಅಭಿವೃದ್ಧಿ ಕಂಡಿವೆ ಎಂದು ಮುಂಬೈನ ಟೆಕ್ನಾಲಜಿ ಇನೊ್ನೕವೇಶನ್ ಮತ್ತು ಡೆವಲಪ್ಮೆಂಟ್ ಪ್ಲಾಟ್ಫಾಮ್ರ್್ಸ ಲಿಮಿಟೆಡ್ನ ಹಿರಿಯ ಉಪಾಧ್ಯಕ್ಷ ಜಿಯಾ ಸಾಕಿಬ್ ಹೇಳಿದರು.
‘ನವ ಯುಗದ ಬುದ್ಧಿವಂತ ತಂತ್ರಜ್ಞಾನಗಳು’ ವಿಷಯ ಕುರಿತು ನಗರದ ಗೋಕುಲ ರಸ್ತೆಯ ಕೆಎಲ್ಇ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ 3ನೇ ಐಇಇಇ ಅಂತಾರಾಷ್ಟ್ರೀಯ ಸಮ್ಮೇಳನ ‘ಕೊನಿಟ್-2023’ ರಲ್ಲಿ ಅವರು ಅತಿಥಿಯಾಗಿ ಮಾತನಾಡಿದರು.
ಮಧುಮೇಹ ಮತ್ತು ಕ್ಯಾನ್ಸರ್ ನಿಂದ ಬಳಲುತ್ತಿರುವ ಲಕ್ಷಾಂತರ ಜೀವಗಳನ್ನು ಉಳಿಸಲು ಕೃತಕ ಬುದ್ದಿಮತ್ತೆ ಮತ್ತು ಅತ್ಯಾಧುನಿಕ ವೈದ್ಯಕೀಯ ಸಾಧನಗಳ ಸಾಮರ್ಥ್ಯ ಅಗಾಧವಾಗಿದೆ. ಥರ್ಮಲ್ ಕ್ಯಾಮೆರಾಗಳು ಮತ್ತು ಇಮೇಜ್ ಪ್ರೊಸೆಸಿಂಗ್ ಅಲ್ಗಾರಿದಮ್ಳೊಂದಿಗೆ ಸೇರಿಕೊಂಡು ಕ್ಯಾನ್ಸರ್ ಕೋಶಗಳನ್ನು ಪತ್ತೆಹಚ್ಚುವಲ್ಲಿ ಪ್ರಮುಖ ಸಾಧನಗಳಾಗಿ ಗುರುತಿಸಲಾಗಿದೆ ಎಂದು ತಿಳಿಸಿದರು. ಮಣಿಪಾಲ್ ತಾಂತ್ರಿಕ ಮಹಾವಿದ್ಯಾಲಯ ಮಾಹಿತಿ ಮತ್ತು ಸಂವಹನದ ಹಿರಿಯ ಪ್ರಾಧ್ಯಾಪಕ ಡಾ. ಮನೋಹರ್ ಪೈ ಮಾತನಾಡಿ, ಕೃತಕ ಬುದ್ಧಿಮತ್ತೆ, ದತ್ತಾಂಶ ವಿಶ್ಲೇಷಣೆ ಮತ್ತು ಕ್ಲೌಡ್ ಕಂಪ್ಯೂಟಿಂಗ್ನಲ್ಲಿ ಸಂಶೋಧನೆಯನ್ನು ಮುಂದುವರಿಸುವಲ್ಲಿ ಯುವಕರ ನಿರ್ಣಾಯಕ ಪಾತ್ರದ ಬಗ್ಗೆ ತಿಳಿಸಿದರು.
ಕೆಎಲ್ಇತಾಂತ್ರಿಕ ವಿಶ್ವವಿದ್ಯಾಲಯದ ಹಾಲಿ ಕುಲಸಚಿವ ಡಾ. ಬಿ.ಎಸ್.ಅನಾಮಿ, ವಿಚಾರ ವಿನಿಮಯ, ನೆಟ್ವರ್ಕಿಂಗ್ ಮತ್ತು ಮುಂಬರುವ ಆವಿಷ್ಕಾರಗಳಿಗೆ ವೇದಿಕೆ ಒದಗಿಸುವ ಮಹತ್ವ ವಿವರಿಸಿದರು.
ಐಇಇಇ ಕೆಎಲ್ಇ ಜನರಲ್ ಚೀಫ್ ಮತ್ತು ಕಾಲೇಜಿನ ಪ್ರಾಂಶುಪಾಲ ಡಾ. ಶರದ್ ಜೋಶಿ, ಸಮೆ್ಮೕಳನದ ಪ್ರಮುಖ ಅಂಕಿ ಅಂಶಗಳನ್ನು ಮಂಡಿಸಿದರು. ಕೆಎಲ್ಇ ಆಡಳಿತ ಮಂಡಳಿ ಸದಸ್ಯ ಶಂಕರಣ್ಣ ಮುನವಳ್ಳಿ ಅಧ್ಯಕ್ಷತೆ ವಹಿಸಿದ್ದರು.
ಸ್ಲೋವಾಕಿಯಾದ ಜಿಲಿನಾ ವಿಶ್ವವಿದ್ಯಾನಿಲಯದ ಡಾ. ಜೋನ್ನಾ ರೋಸಾಕ್ಸಿಜ್ರೊಕಾ, ಇರಾಕ್ನ ದಿಯಾಲಾ ವಿಶ್ವವಿದ್ಯಾಲಯದ ಐಇಇಇ ಪಿಇಎಸ್ ಚೇರ್ ಡಾ. ಹುಸೇನ್ ಮಹದಿ, ಡಾ. ಸುಮನ್ ಡಿ. ಡಾ. ಜಯಪ್ರಕಾಶ ಠಾಕೂರ್ ಮಾತನಾಡಿದರು.
ಐಇಇಇ ಬೆಂಗಳೂರು ವಿಭಾಗದ ಸಂಯೋಜಕ ಹರೀಶ ಪಾಟೀಲ, ಸಮೆ್ಮೕಳನದ ಸಂಚಾಲಕ ಡಾ.ಯರ್ರಿಸ್ವಾಮಿ, ಡಾ. ಕುಮಾರಸ್ವಾಮಿ, ಡಾ. ಶ್ರೀಧರ ಅಲಗಿ, ಪ್ರೊ. ರವಿ ಹೊಸಮನಿ ಹಾಗೂ ಇತರರು ಉಪಸ್ಥಿತರಿದ್ದರು