ಗದಗ ಕೆಎಲ್​ಇ ಸಂಸ್ಥೆಯಲ್ಲಿ ಬುಧವಾರ ಏರ್ಪಡಿಸಿದ್ದ ವಿಚಾರ ಸಂಕಿರಣವನ್ನು ಡಾ. ಸಿ. ಎಸ್​. ಹಸಬಿ ಉದ್ಘಾಟಿಸಿದರು. ಡಾ. ವೀಣಾ, ಪ್ರೊ. ಗೌರಾ ಯಳಮಲಿ, ಪ್ರೊ. ಚಂದಾಲಿಂಗ ಹಳ್ಳಿಕೇರಿ ಇತರರು ಇದ್ದರು. 
ಜಿಲ್ಲೆ

ಬೌದ್ಧಿಕ ಆಸ್ತಿ ಹಕ್ಕುಗಳ ರಣೆ ನಮ್ಮೆಲ್ಲರ ಹೊಣೆ: ಅರುಂಧತಿ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ
ನಮ್ಮ ಭೌದ್ಧಿಕ ಆಸ್ತಿಗಳಿಗೆ ಸರಿಯಾದ ಬೇಲಿ ಹಾಕಿ, ಅದನ್ನು ಆಥಿರ್ಕ ಬೆಳವಣಿಗೆಗೆ ಬಳಸಿಕೊಳ್ಳುವ ನಿಟ್ಟಿನಲ್ಲಿ ನಾವೆಲ್ಲ ಗಟ್ಟಿ ಹೆಜ್ಜೆ ಇಡಬೇಕಿದೆ ಎಂದು ಕರ್ನಾಟಕ ಉನ್ನತ ಶಿಣ ಅಕಾಡೆಮಿಯ ಡೀನ್​ ಅರುಂಧತಿ ಹೇಳಿದರು.
ನಗರದ ಕೆ.ಎಲ್​ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ವಿಭಾಗದ ಸಹಯೋಗದಲ್ಲಿ ಜರುಗಿದ "ಬೌದ್ಧಿಕ ಆಸ್ತಿ ಹಕ್ಕುಗಳು' ವಿಷಯದ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದರು.
ಕೇಂದ್ರ ಸರ್ಕಾರ ಇತ್ತೀಚಿಗೆ ಸಮಗ್ರ ಭೌದ್ಧಿಕ ಆಸ್ತಿ ಹಕ್ಕು ನೀತಿ ಪ್ರಕಟಿಸಿದೆ. ನಮ್ಮ ಭೌದ್ಧಿಕ ಆಸ್ತಿ ರ್ದುಬಳಕೆ ಆಗದಂತೆ ತಡೆಯುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ನಮ್ಮ ಆಲೋಚನೆಯನ್ನು ಇತರರಿಗೆ ಕದಿಯಲು ಬಿಟ್ಟರೆ, ಯಶಸ್ವಿನ ಹಾದಿಗೆ ನಾವೇ ಅಡ್ಡಗಾಲು ಹಾಕಿದಂತೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಿವೃತ್ತ ಪ್ರಾಚಾರ್ಯ ಡಾ. ಸಿ. ಎಸ್​. ಹಸಬಿ, ದೇಶದಲ್ಲಿ ವ್ಯಾಪಾರ ವಹಿವಾಟಿಗೆ ಅನುಕೂಲಕರ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಭೌದ್ಧಿಕ ಆಸ್ತಿಹಕ್ಕು ಅತ್ಯಂತ ಮುಖ್ಯವಾಗಿದೆ. ವಿದೇಶಿ ಉತ್ಪನ್ನಗಳ ಮೇಲಿನ ಅವಲಂಬನೆ ತಗ್ಗಿಸಿ, ಸ್ವದೇಶಿ ಉತ್ಪನ್ನ ಅಭಿವೃದ್ಧಿ ಪಡಿಸುವುದು ವಿಚಾರಣ ಸಂಕಿರಣದ ಉದ್ದೇಶವಾಗಿದೆ. ಹೊಸದಾಗಿ ಕಂಡು ಹಿಡಿಯುವ ಅವಿಷ್ಕಾರಗಳ ಟ್ರೇಡ್​ಮಾರ್ಕ್​ ಹಾಗೂ ಹಕ್ಕು ಸ್ವಾಮ್ಯ ರಸಿಕೊಳ್ಳುವುದು, ಸೃಜನಶೀಲತೆ, ಸಂಶೋಧನೆ ಮೂಲಕ ಉದ್ಯಮಶೀಲತೆ ಉತ್ತೇಜಿಸುವುದು, ಸಾಮಾಜಿಕ, ಆಥಿರ್ಕ, ಸಾಂಸತಿಕ ಅಭಿವೃದ್ಧಿ ಪ್ರೇರೇಪಿಸುವುದು ಇದರ ಭಾಗವಾಗಿದೆ. ವಿದ್ಯಾಥಿರ್ಗಳು ಉದ್ದಿಮೆದಾರರಾಗುವ ಮುನ್ನ ತಮ್ಮ ಉತ್ಪನ್ನಗಳಿಗೆ ಪ್ರಮಾಣ ಪತ್ರ ಪಡೆಯುವುದರಿಂದ ವಿದೇಶಿ ವಸ್ತುಗಳಿಗೆ ಪೈಪೋಟಿ ನೀಡಲು ಅನುಕೂಲವಾಗುತ್ತದೆ ಎಂದರು
ಅಧ್ಯತೆ ವಹಿಸಿದ್ದ ಪ್ರಾಚಾರ್ಯ ಎ. ಕೆ. ಮಠ ಮಾತನಾಡಿ, ಪ್ರಾಚಿನ ಭಾರತೀಯ ಧರ್ಮವು ಜ್ಞಾನದ ಮುಕ್ತ ಹರಿವನ್ನು ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಸುಗಮಗೊಳಿಸುತ್ತಿತ್ತು. ವೇದಗಳಲ್ಲಿ, ಉಪನಿಷತ್ತುಗಳಲ್ಲಿ ಅಡಗಿರುವ ರಹಸ್ಯಗಳು ಭಾರತೀಯರಿಗಿಂತ ಹೆಚ್ಚಾಗಿ ವಿದೇಶಿಯರೇ ಬಳಸಿದ್ದಾರೆ. ಹೀಗಾಗಿ ಭೌದ್ಧಿಕ ಆಸ್ತಿಹಕ್ಕುಗಳ ಜ್ಞಾನವು ಇಂದು ಎಲ್ಲರ ಅಗತ್ಯವಾಗಿದೆ ಎಂದರು.
ಡಾ. ವೀಣಾ, ಪ್ರೊ. ಗೌರಾ ಯಳಮಲಿ, ಪ್ರೊ. ಚಂದಾಲಿಂಗ ಹಳ್ಳಿಕೇರಿ ಇತರರು ಇದ್ದರು.