ಹುಬ್ಬಳ್ಳಿ: ನಗರದ ಜಗದ್ಗುರು ಗಂಗಾಧರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕೆಎಲ್ಇ ಸಂಸ್ಥೆಯ 109ನೇ ಸಂಸ್ಥಾಪನೆ ದಿನವನ್ನು ಬುಧವಾರ ಆಚರಿಸಲಾಯಿತು.
ಹತ್ತಿಮತ್ತೂರ ವಿರಕ್ತಮಠದ ಶ್ರೀ ನಿಜಗುಣ ಶಿವಯೋಗಿಗಳು ಮಾತನಾಡಿ, ಕೆಎಲ್‌ಇ ಸಂಸ್ಥೆಯ ಸಂಸ್ಥಾಪಕರು, ಎಲ್ಲರಿಗೂ ಪೂರಕ, ಪ್ರೇರಕ, ಮಾರ್ಗದರ್ಶಕರಾಗಿದ್ದಾರೆ. ಅವರ ಶಕ್ತಿಯೇ ಈ ಸಂಸ್ಥೆಯ ದೈತ್ಯವಾಗಿ ಬೆಳೆಯುವಂತೆ ಮಾಡಿದೆ ಎಂದರು.
ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಡಾ.ಎಂ.ಎಸ್. ಬೆಂಬಳಗಿ ಅಧ್ಯಕ್ಷತೆ ವಹಿಸಿದ್ದರು.
ಪ್ರಾಚಾರ್ಯರಾದ ಪ್ರೊ.ಎಸ್.ಎಲ್. ಪಾಟೀಲ, ಡಾ.ಡಿ.ಕೆ.ವಾಘಮೋಡೆ ಅವರು ಕೆಎಲ್‌ಇ ಸಂಸ್ಥೆಯ ಸಾಧನೆ ಸ್ಮರಿಸಿದರು.
ಜ್ಯೋತಿ ಉಕ್ಲಿ ಪ್ರಾರ್ಥಿಸಿದರು. ಡಾ. ನೇತ್ರಾವತಿ ಗಬ್ಬೂರ ವಂದಿಸಿದರು. ಪ್ರೊ. ಪವಿತ್ರಾ ಬೂಶೆಟ್ಟಿ ನಿರೂಪಿಸಿದರು.