ಬೆಳಗಾವಿಯ ಕೆಎಲ್‌ಎಸ್ ಐಎಂಇಆರ್ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಇನ್ನೋವೇಟಿವ್ ಮ್ಯಾನೇಜಮೆಂಟ್ ಸಂಗಮ-20 ಉತ್ಸವವನ್ನು ರಾಷ್ಟ್ರೀಯ ಪ್ರಶಸ್ತಿ ವಿಜೇತೆ ಶ್ರಾವಣಿ ಪವಾರ್ ಉದ್ಘಾಟಿಸಿದರು. ಮುತಾಲಿಕ್ ದೇಸಾಯಿ, ಡಾ. ಅತುಲ್ ದೇಶಪಾಂಡೆ ಹಾಗೂ ಡಾ. ಕೀರ್ತಿ ಶಿವಕುಮಾರ್ ಇದ್ದರು. 
ಜಿಲ್ಲೆ

ಕೆಎಲ್‌ಇ ಸಿಬಿಎಲ್‌ಸಿ ಪ.ಪೂ. ಮಹಾವಿದ್ಯಾಲಯ ಚಾಂಪಿಯನ್

ಬೆಳಗಾವಿ: ನಗರದ ಕೆಎಲ್‌ಎಸ್ ಐಎಂಇಆರ್ ಮಹಾವಿದ್ಯಾಲಯದಲ್ಲಿ ಪದವಿಪೂರ್ವ ವಿದ್ಯಾರ್ಥಿಗಳಿಗೆ ಈಚೆಗೆ ಆಯೋಜಿಸಿದ್ದ ಇನ್ನೋವೇಟಿವ್ ಮ್ಯಾನೇಜಮೆಂಟ್ ಸಂಗಮ-20 ಉತ್ಸವದಲ್ಲಿ ಬೆಳಗಾವಿಯ ಕೆಎಲ್‌ಇ ಸಿಬಿಎಲ್‌ಸಿ ಮಹಾವಿದ್ಯಾಲಯ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತು.

ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರದ ವಿವಿಧ ಕಾಲೇಜುಗಳಿಂದ 35 ತಂಡಗಳು ಪಾಲ್ಗೊಂಡಿದ್ದವು. ಅತ್ಯುತ್ತಮ ವ್ಯವಸ್ಥಾಪಕರ ಸ್ಪರ್ಧೆಯಲ್ಲಿ ಖುಷಿ ಮೆಹ್ತಾ ಪ್ರಶಸ್ತಿ ಪಡೆದುಕೊಂಡರು. ರಾಷ್ಟ್ರೀಯ ಪ್ರಶಸ್ತಿ ವಿಜೇತೆ ಶ್ರಾವಣಿ ಪವಾರ, ಕೆಎಲ್‌ಎಸ್ ಐಎಂಇಆರ್ ಅಧ್ಯಕ್ಷ ಮುತಾಲಿಕ್ ದೇಸಾಯಿ, ಐಎಂಇಆರ್ ನಿರ್ದೇಶಕ ಡಾ. ಅತುಲ್ ದೇಶಪಾಂಡೆ ಅವರು ವಿಜೇತರಿಗೆ ಬಹುಮಾನ ವಿತರಿಸಿದರು. ಡಾ. ಕೀರ್ತಿ ಶಿವಕುಮಾರ, ಡಾ. ಶ್ರೀಕಾಂತ್ ನಾಯಕ ಮತ್ತು ಪ್ರೊ. ಸುಮಂತ ದೇಸಾಯಿ ಇತರರು ಇದ್ದರು.