ವಿಜಯವಾಣಿ ಸುದ್ದಿಜಾಲ ಗದಗ
ನಗರದ ಕೆಎಲ್ಇ ಸಂಸ್ಥೆಯಲ್ಲಿ ಗುರುವಾರ ಎನ್ಎಸ್ಎಸ್ ಮತ್ತು ಐಎಂಎ ಬ್ಲಡ್ ಬ್ಯಾಂಕ್ ವತಿಯಿಂದ ರಕ್ತದಾನ ಶಿಬಿರ ಜರುಗಿದು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಾಚಾರ್ಯ ಡಾ. ಎ. ಕೆ. ಮಠ, ರಕ್ತದಾನ ದಾನಗಳಲ್ಲಿ ಮಹತ್ವದ ಸ್ಥಾನ ಪಡೆದಿದೆ, ರಕ್ತದಾನ ಮಾಡುವದರಿಂದ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಹಾಗೂ ರಕ್ತದಾನದಿಂದ ಹಲವು ಜೀವಗಳು ಉಳಿಯುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ನೀಡಲಾಯಿತು. ಪ್ರಥಮ ಸ್ಥಾನ ಸಹನಾ ನಾಲ್ವಾಡದ, ದ್ವೀತಿಯ ಸ್ಥಾನ ರುದ್ರಗೌಡ ಹೀರೆಗೌಡರ, ತೃತೀಯ ಸ್ಥಾನ ಅಂಜಲಿ ದಹಿಂಡೆ ಅವರಿಗೆ ಪ್ರಶಸ್ತಿ ವಿತರಿಸಲಾಯಿತು.
ವಾಗೀಶ ರೇಶ್ಮಿ, ಪ್ರೊ. ವೀರಣ್ಣ ಬಡಿಗೇರ, ಅನೀಲ ಭಜಂತ್ರಿ. ಕಿರಣ ಬೊರಕರ, ಅತಾ ಅಣ್ಣಿಗೇರಿ, ರಾವೇಂದ್ರ ಹೊಸಳ್ಳಿ ಇತರರು ಇದ್ದರು.