ನಗರದ ಕೆಎಲ್​ಇ ಸಂಸ್ಥೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಎಸ್​.ಪಿ.ಸಂಶಿಮಠ, ಈಶಣ್ಣ ಮುನವಳ್ಳಿ, ಸದಾಶಿವ ಮದರಿಮಠ ಅವರನ್ನು ಸನ್ಮಾನಿಸಲಾಯಿತು. ಮಹಾಂತೇಶ್​ ಕವಟಗಿಮಠ, ವಿರೇಶ ಕೂಗು, ಎಸ್​. ಎಸ್​. ಪಟ್ಟಣಶೆಟ್ಟಿ, ಆರ್​. ಟಿ. ಪವಾಡಶೆಟ್ಟರ ಹಲವರು ಇದ್ದರು. 
ಜಿಲ್ಲೆ

ಸಾಧಿಸುವರಿಗೆ ಪ್ರೋತ್ಸಾಹಿಸಲು ಕೆಎಲ್​ಇ ಸಂಸ್ಥೆ ಯಾವಾಗಲು ಸಿದ್ಧ : ಮಹಾಂತೇಶ್​ ಕವಟಗಿಮಠ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ
ಉತ್ತರಕರ್ನಾಟಕದ ಬೆಳವಣಿಗೆಯಲ್ಲಿ ಹಾಗೂ ಜನರ ಬೇಡಿಕೆಗಳ ಕುರಿತು ಸರ್ಕಾರಕ್ಕೆ ಸಲಹೆ ನೀಡುತ್ತ ಬಂದಿರುವ ಹುಬ್ಬಳ್ಳಿ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಪಾತ್ರದೊಡ್ಡದು ಎಂದು ಕೆ.ಎಲ್​.ಇ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ಮಹಾಂತೇಶ್​ ಕವಟಗಿಮಠ ಹೇಳಿದರು.
ನಗರದ ಕೆ.ಎಲ್​.ಇ ಸಂಸ್ಥೆಯಲ್ಲಿ ಸೋಮವಾರ ಆಯೋಜಿಸಿದ್ದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಲು ಕೆಎಲ್​ಇ ಸಂಸ್ಥೆ ಯಾವಾಗಲೂ ಮುಂಚೂಣಿಯಲಿರುತ್ತದೆ. ಈ ಸಾಧಕರು ಮುಂದಿನ ಪೀಳಿಗೆಗೆ ಮಾದರಿಯಾಗಬೇಕು. ಉತ್ತರ ಕರ್ನಾಟಕದವರು ಉದ್ಯೋಗ ಸೃಷ್ಟಿಸುವಂತಾಗಬೇಕು. ಯುವಜನಾಂಗಕ್ಕೆ ಉದ್ಯೋಗ ನೀಡಬೇಕು. ಇಂದಿನ ಕುಟುಂಬಗಳು ಆದರ್ಶ ಕುಟುಂಬಗಳಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕೆ.ಎಲ್​.ಇ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ಶಂಕ್ರಣ್ಣ ಮುನವಳ್ಳಿ ಮಾತನಾಡಿ, ಮನುಷ್ಯನಿಗೆ ಅಧಿಕಾರ ಶಾಶ್ವತ ಅಲ್ಲ. ತಾವು ಮಾಡಿದ ಕೆಲಸಗಳು ಶಾಶ್ವತ. ಸಾಧನೆ ಮಾಡಿದ ವ್ಯಕ್ತಿಗಳಿಗೆ ಸನ್ಮಾನಿಸಿ ಗೌರವಿಸಬೇಕು. ಸಾಧನೆ ಮಾಡಿದ ವ್ಯಕ್ತಿಗಳಿಗೆ ಸನ್ಮಾನಿಸಿ ಗೌರವಿಸು ಕೆಲಸವನ್ನು ಕೆಎಲ್​ಇ ಮಾಡುತ್ತ ಬಂದಿದೆ ಎಂದರು.
ವಿಧಾನ ಪರಿಷತ್​ ಸದಸ್ಯ ಎಸ್​. ವಿ. ಸಂಕನೂರ್​ ಮಾತನಾಡಿ, ಒಬ್ಬ ವ್ಯಕ್ತಿ ಕಷ್ಟ ಪಟ್ಟು ಶ್ರದ್ಧೆಯಿಂದ ಕೆಲಸ ಮಾಡಿದರೆ ಯಶಸ್ಸು ಕಾಣಬಹುದು. ಇಂದು ಕೆ.ಎಲ್​.ಇ ಸಂಸ್ಥೆ ಬಹಳ ಸಾಧಕರನ್ನು ಹುಟ್ಟು ಹಾಕಿದೆ. ಇದರ ಯಶಸ್ಸು ಡಾ. ಪ್ರಭಾಕರ ಕೋರೆಯವರಿಗೆ ಹಾಗೂ ಆಡಳಿತ ಮಂಡಳಿಗೆ ಸಲ್ಲಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ತೋಂಟದಾರ್ಯ ಮಠದ ತೋಟಂದ ಸಿದ್ದರಾಮ ಶ್ರೀಗಳು ಮಾತನಾಡಿ, ಎಸ್​.ಪಿ.ಸಂಶಿಮಠ ಹಾಗೂ ಈಶಣ್ಣ ಮುನವಳ್ಳಿಯವರ ಕೊಡುಗೆ ಬಹಳ ಇದೆ. ಸಮಾಜದಲ್ಲಿ ಇನ್ನೂ ಹಲವಾರು ಉದ್ಯಮಿಗಳು ಹುಟ್ಟಿಕೊಳ್ಳಬೇಕು. ಪ್ರತಿಯೊಬ್ಬರು ಸೇವೆಯಯಲ್ಲಿ ಸಹ ತೊಡಗಿಕೊಳ್ಳಬೇಕು. ಪ್ರತಿ ವ್ಯಕ್ತಿಯೂ ಸಹ ಸೇವೆಯನ್ನು ಮಾಡಬೇಕು ಎಂದರು.
ಹುಬ್ಬಳ್ಳಿ ಕರ್ನಾಟಕ ವಾಣಿಜ್ಯೋಮ ಸಂಸ್ಥೆಗೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಎಸ್​.ಪಿ.ಸಂಶಿಮಠ ಹಾಗೂ ಗದಗ ವಾಣಿಜ್ಯೋದ್ಯಮ ಮತ್ತ ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆಯಾದ ಈಶಣ್ಣ ಮುನವಳ್ಳಿಯವರನ್ನು ಹಾಗೂ ಕಾರ್ಯದಶಿರ್ಯಾಗಿ ಆಯ್ಕೆಯಾದ ಸದಾಶಿವಯ್ಯ ಮದರಿಮಠ ಹಾಗೂ ಯುವ ಉದ್ಯಮಿ ಶರತಚಂದ್ರ ಕವಟಗಿಮಠರನ್ನು ಸನ್ಮಾನಿಸಲಾಯಿತು.
ವಿರೇಶ ಕೂಗು, ಎಸ್​. ಎಸ್​. ಪಟ್ಟಣಶೆಟ್ಟಿ, ಆರ್​. ಟಿ. ಪವಾಡಶೆಟ್ಟರ, ತೋಂಟೇಶ ಮಾನ್ವಿ , ಪಿ. ಜಿ. ಪಾಟೀಲ, ಎಸ್​. ಬಿ. ಹಾವೇರಿ, ಎ. ಕೆ. ಮಠ, ಸಂತೋಷ ಪಾಟೀಲ, ಡಾ. ರಮೇಶ ಬಿ ಸೇರಿದಂತೆ ಹಲವರು ಇದ್ದರು.