ಯಡ್ರಾಮಿ: ಹರಿದು ಹಂಚಿ ಹೋಗಿದ್ದ ವಚನಗಳ ತಾಳೆಗರಿಗಳನ್ನು ಸಂಗ್ರಹಿಸಿ, ಬಸವಾದಿ ಶರಣರ ವಚನಗಳು ಹಾಗೂ ಅವುಗಳಲ್ಲಿನ ಮಾನವೀಯತೆಯ ತತ್ವಗಳು ಜನರ ಮನ ಮುಟ್ಟುವಂತೆ ಮಾಡಿದ ಕೀರ್ತಿ ಡಾ.ಫ.ಗು.ಹಳಕಟ್ಟಿ ಅವರಿಗೆ ಸಲ್ಲುತ್ತದೆ ಎಂದು ಕಡಕೋಳ ಮಡಿವಾಳೇಶ್ವರ ಮಹಾಮಠದ ಶ್ರೀ ಡಾ.ರುದ್ರಮುನಿ ಶಿವಾಚಾರ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.
ಸುಂಬಡದ ಇಂದಿರಾಗಾAಧಿ ವಸತಿ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನಿಂದ ಬುಧವಾರ ಹಮ್ಮಿಕೊಂಡಿದ್ದ ಡಾ.ಫ.ಗು.ಹಳಕಟ್ಟಿ ಅವರ 144ನೇ ಜಯಂತಿ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿ, ಬಡತನ ಬದಿಗೊತ್ತಿ ತನ್ನ ಬದುಕಿನ ಸರ್ವಸ್ವವನ್ನು ತ್ಯಾಗ ಮಾಡಿ ವಚನ ಸಾಹಿತ್ಯ ರಕ್ಷಿಸಿದರು. ಬಸವಾದಿ ಶರಣರ ವಚನಗಳು ಇಂದಿಗೂ ಜನಮಾನಸದಲ್ಲಿ ಉಳಿಯಲು ಹಳಕಟ್ಟಿ ಅವರ ಶ್ರಮವೇ ಕಾರಣ ಎಂದು ಬಣ್ಣಿಸಿದರು.
ಇಂದಿನ ಯುವ ಪೀಳಿಗೆ ಆಧುನಿಕತೆಗೆ ಒಗ್ಗಿಕೊಳ್ಳುವುದರ ಜತೆಗೆ ಶರಣರ ವಚನ ಸಾಹಿತ್ಯದ ಬಗ್ಗೆ ತಿಳಿದುಕೊಳ್ಳಬೇಕು. ನಮ್ಮ ಮನೆಯಲ್ಲಿರುವ ಸಂಪತ್ತನ್ನು ಕಾಯ್ದುಕೊಂಡ ಹಾಗೆ ಶರಣರ ವಚನ ಸಾಹಿತ್ಯ ಸಂಪತ್ತನ್ನು ಕಾಯ್ದುಕೊಳ್ಳಬೇಕು. ವಿದ್ಯಾರ್ಥಿಗಳು ವಚನ ಸಾಹಿತ್ಯವನ್ನು ಆದರ್ಶವನ್ನಾಗಿಟ್ಟುಕೊಂಡು ಸಾಗಿದರೆ ಯಶಸ್ಸು ಲಭಿಸುತ್ತದೆ ಎಂದು ತಿಳಿಸಿದರು.
ಟಿಎಪಿಸಿಎಂಎಸ್ ಅಧ್ಯಕ್ಷ ಬಸವರಾಜ ಖಾನಗೌಡರ, ಸಪ್ತ ನೇಕಾರ ಸ್ವಯಂ ಸೇವಾ ಸಂಸ್ಥೆ ಅಧ್ಯಕ್ಷ ಶಿವಲಿಂಗಪ್ಪ ಅಷ್ಟಗಿ, ಕಸಾಪ ತಾಲೂಕು ಅಧ್ಯಕ್ಷ ನಾಗಪ್ಪ ಸಜ್ಜನ್, ಪ್ರಾಂಶುಪಾಲ ಮಡಿವಾಳಪ್ಪ ದುದ್ದಣಗಿ, ಪ್ರಮುಖರಾದ ಬಸಲಿಂಗಪ್ಪ ಸಾಹು ಅಂಕಲಕೋಟೆ, ರಾಜೇಂದ್ರ ಮಾಡಬೂಳ, ವಿನೋದಕುಮಾರ, ಬಸ್ಸಮ್ಮ ಪೊಲೀಸ್ ಪಾಟೀಲ್, ಬಸ್ಸಣ್ಣ ಮಾರಡಗಿ, ಬಸವರಾಜ ಬೋರಗಿ, ಬಸವರಾಜ ಅರಕೇರಿ, ನೀಲಮ್ಮ ಮಾಗಣಗೇರಿ, ಆರ್.ಜಿ.ಪುರಾಣಿಕ, ಅರವಿಂದ ದೇಸಾಯಿ, ಮಹಾದೇವ ಬಿದನೂರ, ಸಂತೋಷ ಮೆಡೆದರ, ರಾಮಚಂದ್ರ, ಸಿದ್ದಪ್ಪ ಕೋನಹಳ್ಳಿ, ರಾಜು ಕುನ್ನೂರ, ಬಸವನಗೌಡ ಮಾಶ್ಯಾಳ, ಟೋಪು ಚವ್ಹಾಣ್, ಪರಮೇಶ್ವರ ಮೇಲಿನಮನಿ, ಯಲ್ಲಾಲಿಂಗ ಇತರರಿದ್ದರು.