ಜಿಲ್ಲೆ

ಶಹಾಬಾದ್​; ವಿದ್ಯಾರ್ಥಿಗಳಿಗೆ ಸಂಗೀತ ಹೇಳಿಕೊಡಿ

ಕೃಷ್ಣ ಕುಲಕರ್ಣಿ

ಶಹಾಬಾದ್: ಸಂಗೀತದಿAದ ಮನಸ್ಸಿನಲ್ಲಿ ಏಕಾಗ್ರತೆ ಮೂಡಿಸುವುದರ ಜತೆಗೆ ಮಿದುಳನ್ನು ಚುರುಕುಗೊಳಿಸುತ್ತದೆ. ಹೀಗಾಗಿ ಮಕ್ಕಳಿಗೆ ಸಂಗೀತ ಕಲಿಸಬೇಕು ಎಂದು ಕೂಡಲಸಂಗಮ ಶಿಕ್ಷಣ ಸಂಸ್ಥೆ ಶಿಕ್ಷಕ ಗಿರಿಮಲ್ಲಪ್ಪ ವಳಸಂಗ ಅಭಿಪ್ರಾಯಪಟ್ಟರು.

ಲಕ್ಷ್ಮೀ ಗಂಜ್‌ನಲ್ಲಿರುವ ಸೆಂಟ್ ಥಾಮಸ್ ಶಾಲೆಯಲ್ಲಿ ಜಿ.ಬಿ.ಸಂಗೀತ ಕಲಾ ಸಂಸ್ಥೆಯಿAದ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಗುರುಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳ ಬೆಳವಣಿಗೆಗೆ ಮೊಬೈಲ್ ಎಷ್ಟು ಪೂರಕವೋ, ಅಷ್ಟೇ ಮಾರಕವಾಗಿದೆ. ಮಕ್ಕಳು ಮೊಬೈಲ್‌ನಲ್ಲಿ ಕಳೆಯುವ ಕಾಲವನ್ನೇ ಸಂಗೀತ ಕಲೆಯಲು ಬಳಸಿಕೊಳ್ಳಬೇಕು. ಇದರಿಂದ ಮುಂದಿನ ಭವಿಷ್ಯ ರೂಪಿಸಿಕೊಳ್ಳಲು ಸಹಕಾರ ಆಗಲಿದೆ ಎಂದು ಹೇಳಿದರು.
ಸೆಂಟ್ ಥಾಮಸ್ ಚರ್ಚ್ನ ಧರ್ಮಗುರು ಜೆರಾಲ್ಡ್ ಸಾಗರ ಉದ್ಘಾಟಿಸಿದರು. ಪ್ರಮುಖರಾದ ಬಸವರಾಜ ಸ್ಥಾವರಮಠ, ಸಾಬೇರಾ ಬೇಗಂ, ಲೀಲಾವತಿ ಸೋನಾರ್ ಇತರರಿದ್ದರು.

ಮಲ್ಲಿಕಾರ್ಜುನ ಭಜಂತ್ರಿ ಶಾಸ್ತಿçಯ ಸಂಗೀತ, ವಿನಿತಾ ಪೊದ್ದಾರ್ ಸುಗಮ ಸಂಗೀತ, ವಿಜಯಲಕ್ಷ್ಮೀ ಹಾಗೂ ಸಂಗಡಿಗರು ಅಭಂಗ ಪ್ರಸ್ತುತ ಪಡಿಸಿದರು. ಮೌನೇಶ್ವರ ಸೋನಾರ್ ಹಾರ್ಮೋನಿಯಂ, ಲೋಕೇಶ ಪತ್ತಾರ್ ತಬಲಾ ಸಾಥ್ ನೀಡಿದರು. ಶಾಂತಪ್ಪ ಹಡಪದ ನಿರೂಪಣೆ ಮಾಡಿದರು.