ಜಿಲ್ಲೆ

ರಾಜಶೇಖರ ನೀಲಂಗಿ ತಾಲೂಕು ಅಧ್ಯಕ್ಷ

ಕೃಷ್ಣ ಕುಲಕರ್ಣಿ

ಸೇಡಂ: ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ಪದಾಧಿಕಾರಿಗಳು ಭಾನುವಾರ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಶಂಕ್ರಪ್ಪ ಮಾಸ್ಟರ್ ಕೋಸಗಿ ತಿಳಿಸಿದ್ದಾರೆ.

ರಾಜಶೇಖರ ನೀಲಂಗಿ (ತಾಲೂಕು ಅಧ್ಯಕ್ಷ), ಶಿವಶರಣಪ್ಪ ಯಲಗೊಂಡ, ಬಸವರಾಜ ತಡಕಲ್, ರಾಚಣ್ಣ ಪಂಜಗಲ್, ಸಿದ್ದಪ್ಪ ಪಾಟೀಲ್ ಮುಗನೂರ, ಬಿ.ವಿರೇಶ, ಡಾ.ರಾಜಕುಮಾರ ಬಿರಾದಾರ, ಮಹೇಶ ಎಳಮನಿ, ಶ್ರೀಶೈಲ ಮರಗೋಳ, ನಾಗಭೂಷಣ ಅಲ್ಲೂರ, ದೊಡ್ಡಪ್ಪಗೌಡ ಯಡಗಾ, ಅನೀಲಕುಮಾರ ಬಂಡಾ, ಹಣಮಂತರಾವ ಪಾಟೀಲ್ ಬಿಬ್ಬಳ್ಳಿ, ಶರಣಗೌಡ ರುದ್ನೂರ, ಅಂಬಿಕಾದೇವಿ ಪಾಟೀಲ್, ಇಷ್ಟಲಿಂಗಮ್ಮ ಅವರಾದಿ, ಚನ್ನಮ್ಮ ಪಾಟೀಲ್, ಮಲ್ಲಮ್ಮ ಪತ್ರಿ, ರುಕ್ಮಿಣಿ ಕಾಳಗಿ, ವಿಜಯಲಕ್ಷ್ಮಿ ಕೆರಳ್ಳಿ (ಕಾರ್ಯನಿರ್ವಾಹಕ ಸದಸ್ಯರು) ಆಯ್ಕೆಯಾಗಿದ್ದಾರೆ. ಎಲ್ಲ ಪದಾಧಿಕಾರಿಗಳು ಪ್ರಮಾಣಪತ್ರ ವಿತರಿಸಿ ಅಭಿನಂದನೆ ಸಲ್ಲಿಸಲಾಯಿತು.

ಶ್ರೀ ಸದಾಶಿವ ಸ್ವಾಮೀಜಿ, ಶ್ರೀ ಪಂಚಾಕ್ಷರ ಸ್ವಾಮೀಜಿ, ಶಿವಯ್ಯಸ್ವಾಮಿ ಬಿಬ್ಬಳ್ಳಿ, ಶಿವಕುಮಾರ ಬೋಳಶೆಟ್ಟಿ ಇತರರಿದ್ದರು.