ಜಿಲ್ಲೆ

ಸೇಡಂ; ಪಿಎಸ್‌ಐ ಪರಶುರಾಮ ಸಾವಿನ ಸಮಗ್ರ ತನಿಖೆ ಆಗಲಿ

ಕೃಷ್ಣ ಕುಲಕರ್ಣಿ

ಸೇಡಂ: ಯಾದಗಿರಿ ನಗರ ಠಾಣೆಯಲ್ಲಿ ಪಿಎಸ್‌ಐಯಾಗಿ ಕರ್ತವ್ಯ ನಿರ್ವಹಿಸುತಿದ್ದ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ ಪರಶುರಾಮ ಅವರ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಕಾಂಗ್ರೆಸ್ ಶಾಸಕ ಚನ್ನಾರೆಡ್ಡಿ ಪಾಟೀಲ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದಲಿತ ಸಮಾಜದ ಪ್ರಮುಖರು ಒತ್ತಾಯಿಸಿದರು.

ಈ ಕುರಿತು ಸೋಮವಾರ ಸಹಾಯಕ ಆಯುಕ್ತರ ಕಚೇರಿಗೆ ತಹಸೀಲ್ದಾರ್‌ಗೆ ಮನವಿಪತ್ರ ಸಲ್ಲಿಸಿ, ಮೃತ ಪಿಎಸ್‌ಐ ಪರಶುರಾಮ ಕಳೆದ 6-7 ತಿಂಗಳುಗಳಿAದ ಯಾದಗಿರಿ ನಗರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ಅವಧಿಗೂ ಮುನ್ನವೆ ಏಕಾಏಕಿ ವರ್ಗಾವಣೆ ಮಾಡಲಾಗಿತ್ತು. ವರ್ಗಾವಣೆಗಾಗಿ ಸ್ಥಳೀಯ ಶಾಸಕರು ಪುತ್ರನ ಮೂಲಕ ಹಣದ ಬೇಡಿಕೆ ಇಟ್ಟಿದ್ದರು ಎಂದು ಪಿಎಸ್‌ಐ ಪತ್ನಿ ಆರೋಪ ಮಾಡಿದ್ದಾರೆ. ಇದೊಂದು ಅನುಮಾನಾಸ್ಪದ ಸಾವಾಗಿದ್ದು, ಹೀಗಾಗಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡಬೇಕು. ಜತೆಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ದಲಿತ ಮುಖಂಡರಾದ ರಾಜು ಕಟ್ಟಿ, ಮಹಾವೀರ ಅಳ್ಳೊಳ್ಳಿ, ಸಿದ್ದು ಊಡಗಿ, ಮಲ್ಲಿಕಾರ್ಜುನ ಹುಳಗೋಳ, ಸಿದ್ದಲಿಂಗ ಜಿ., ಅರುಣಕುಮಾರ ಮುಡಬೂಳಕರ್, ನಾಗರಾಜ ದೇವನೂರ, ಬಸವರಾಜ ಊಡಗಿ, ಮಾಣಿಕರಾವ ಜಿ. ನಿಡಗುಂದಾ, ಗುರು ಬೊಮ್ನಳ್ಳಿ ಇತರರಿದ್ದರು.