ಕಲಬುರಗಿ: ಜಿಲ್ಲಾ ಮಟ್ಟದ ಕ್ರೀಡಾಕೂಟದ ಉದ್ದ ಜಿಗಿತ, 200 ಮೀಟರ್ ಓಟ ಹಾಗೂ ವಾಲಿಬಾಲ್ ಪಂದ್ಯದಲ್ಲಿ ನಾಲವಾರ ವಲಯದ ಸುಗೂರ್ (ಎನ್) ಗ್ರಾಮದ ಶ್ರೀ ಭೋಜಲಿಂಗೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ಮೂಲಕ ಸತತ ಮೂರನೇ ಬಾರಿಗೆ ಸ್ಟೇಟ್ ಲೆವಲ್ಗೆ ಆಯ್ಕೆಯಾಗಿ ಸಾಧನೆ ಮೆರೆದಿದ್ದಾರೆ.
ಚಂದ್ರಶೇಖರ ಪಾಟೀಲ್ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಜಿಲ್ಲಾ ಮಟ್ಟದ ಕ್ರೀಡಾಕೂಟ ಆಯೋಜಿಸಲಾಗಿತ್ತು. ಉದ್ದ ಜಿಗಿತದಲ್ಲಿ ಜಗಲಿಂಗ ಸಾಬಣ್ಣ ಪ್ರಥಮ ಸ್ಥಾನ ಪಡೆದರೆ, 200 ಮೀಟರ್ ಓಟದಲ್ಲಿ ಜಗಲಿಂಗ ಸಾಬಣ್ಣ ದ್ವಿತೀಯ ಹಾಗೂ ವಾಲಿಬಾಲ್ನಲ್ಲಿ ಶರಣು, ದರ್ಶನ್, ಯೋಗೇಶ್ ಹಾಗೂ ಇನ್ನಿತರ ವಿದ್ಯಾರ್ಥಿಗಳ ತಂಟ ದ್ವಿತೀಯ ಸ್ಥಾನ ಲಭಿಸಿದೆ. ಈ ಎಲ್ಲ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಶ್ರೀ ಭೋಜಲಿಂಗೇಶ್ವರ ಮಠದ ಪೀಠಾಧಿಪತಿ ಶ್ರೀ ಹಿರಗಪ್ಪ ತಾತಾ, ಮುಖ್ಯಗುರು ಶರಣಬಸಪ್ಪ ದೋಣಗಾಂವ್, ಶಿಕ್ಷಕರಾದ ದೇವಿಂದ್ರಪ್ಪ ದೊರೆ, ಕಾಳಿದಾಸ, ನಾಗೇಶ್ ತರಕಸಪೇಟ, ಬಸವರಾಜ ತರಕಸಪೇಟ, ವೆಂಕಟೇಶ ಅಲ್ಲೂರ್, ಹಣಮಂತ, ಸಿಂಧೂ, ಮಲ್ಲಿಕಾರ್ಜುನ್, ಕರಣ, ಸಿದ್ದುಗೌಡ ಕುರಾಳ, ಗಂಗಾಧರ ಕುಂಬಾರ, ವೀರೇಶ್ ಶಾಸ್ತ್ರಿ, ಸಾಬಣ್ಣ ಮಲ್ಕಪನಹಳ್ಳಿ, ರಾಜು ಚಿಗರಹಳ್ಳಿ, ಚಾಂದ್ ಪಾಶ್ ಹಾಗೂ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.