ಜಿಲ್ಲೆ

ಕಮಲಾಪುರ; ಮಗನ ಸಾವಿನಿಂದ ನೊಂದು, ತಾಯಿ ಆತ್ಮಹತ್ಯೆ

ಕೃಷ್ಣ ಕುಲಕರ್ಣಿ

ಕಮಲಾಪುರ: ಮಗನ ಸಾವಿನಂದ ಬಹಳಷ್ಟು ನೊಂದು ತಾಯಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುರುಕೋಟಾ ಬಳಿ ಬುಧವಾರ ಜರುಗಿದೆ.

ಕಲಬುರಗಿಯ ಘಾಟಗೆ ಲೇಔಟ್​ನ ನಿವಾಸಿ ಸಿದ್ದಮ್ಮ ಬಸಪ್ಪ ಕೊಂಡಿ (82) ಆತ್ಮಹತ್ಯೆಗೆ ಶರಣಾದವಳು. ಆರು ತಿಂಗಳ ಹಿಂದೆ ಮಗ ಸಾವನ್ನಪ್ಪಿದ್ದ. ಇದರಿಂದ ಸಾಕಷ್ಟು ಮನನೊಂದು, ಜೀವನದಲ್ಲಿ ಜಿಗುಪ್ಸೆಗೊಂಡಿದ್ದಳು.

ಬುಧವಾರ ಬೆಳಗಿನ ಜಾವಾ ಕುರಿಕೋಟಾದ ಸೇತುವೆ ಬಳಿ ಬಂದಿದ್ದು, ನದಿಗೆ ಹಾರಿ ಮೃತಪಟ್ಟಿದ್ದಾಳೆ. ಈ ಕುರಿತು ಮಹಾಗಾಂವ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.