ಜಿಲ್ಲೆ

ಒಳ್ಳೆಯದು ಮಾಡಿದರೆ ಜೀವನ ಸಾರ್ಥಕ

ಕೃಷ್ಣ ಕುಲಕರ್ಣಿ

ನಿಂಬರ್ಗಾ: ಪ್ರತಿಯೊಬ್ಬರೂ ಜೀವನ ನೂರರ ಗಡಿ ದಾಟಿ ಜೀವಿಸುವ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ. ದೊರೆತ ಅಲ್ಪ ಆಯಸ್ಸಿನಲ್ಲಿ ಕೆಟ್ಟದ್ದನ್ನು ಬಿಟ್ಟು ಒಳ್ಳೆಯದನ್ನು ಮಾಡಿದರೆ ಜನ್ಮ ಸಾರ್ಥಕವಾಗುತ್ತದೆ ಎಂದು ಬಡದಾಳದ ಶ್ರೀ ಚನ್ನಮಲ್ಲ ಶಿವಾಚಾರ್ಯರು ಹೇಳಿದರು.

ಮಾಡಿಯಾಳದ ಶ್ರೀ ಚನ್ನಮಲ್ಲೇಶ್ವರ ಮಠದ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗುರುಪೂರ್ಣಿಮೆ, ಪಾದಪೂಜೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಪ್ರತಿಯೊಬ್ಬರೂ ಬದುಕಿನ ಸಾರ ಅರ್ಥೈಸಿಕೊಂಡು ಉತ್ತಮ ಜೀವನ ಸಾಗಿಸಬೇಕು. ಸ್ವಚ್ಛ ಮನಸ್ಸು, ಪ್ರಾಮಾಣಿಕತೆಯ ಗುಣಗಳನ್ನು ಅಳವಡಿಸಿಕೊಂಡವರು ಗುರು ದೀಕ್ಷೆ ಪಡೆಯಲು ಯೋಗ್ಯರು ಎಂದರು.

ಚಿAಚೋಳಿಯ ಗುದ್ದಗೇಶ್ವರ ಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ಮಾತನಾಡಿ, ಭಕ್ತರ ಅಂಧಕಾರ ದೂರ ಮಾಡಿ ಸುಜ್ಞಾನಿಯನ್ನಾಗಿ ಮಾಡುವುದೇ ಗುರುವಿನ ಕೆಲಸ ಎಂದು ಹೇಳಿದರು.

ಗ್ರಾಪಂ ಅಧ್ಯಕ್ಷ ಸುಭಾಷ ಪೊಲೀಸ್ ಪಾಟೀಲ್, ಪ್ರಮುಖರಾದ ಪ್ರಭುದ್ಧ ಆರ್. ಪಾಟೀಲ್, ಶರಣಗೌಡ ಪಾಟೀಲ್, ಸೂರ್ಯಕಾಂತ ರಾಮಜಿ, ಸುಭಾಷ ಬಿರಾದಾರ, ಶಿವಾನಂದ ಸ್ವಾಮಿ, ಪ್ರಭಾಕರ ಬಿರಾದಾರ, ಸಿದ್ದರಾಮ ಕಂಬಾರ, ಸುರೇಶ ಕಲಶೆಟ್ಟಿ, ನಿಂಗಣ್ಣ ಕಂಬಾರ, ಬಸವರಾಜ ಕೌಲಗಿ, ಯಶವಂತರಾವ ಮಾಲಿಪಾಟೀಲ್, ಸಂಗಣ್ಣ ಮುದ್ದಡಗಿ, ಶರಣಬಸಪ್ಪ ಕಲಶೆಟ್ಟಿ, ದತ್ತಾತ್ರೇಯ ಶಿರೂರ, ಸಂಗಮನಾಥ ಉಪ್ಪಿನ್, ರಮೇಶ ಕಲಶೆಟ್ಟಿ, ಸಂಗಣ್ಣ ದುದ್ದಗಿ, ಬಸವರಾಜ ಕಲ್ಲಶೆಟ್ಟಿ, ಶಿವಶಂಕರ ನವಲಿ ಇತರರಿದ್ದರು.

ಯೋಗಿರಾಜ ಶಾಸ್ತಿç ಪ್ರವಚನ ನೀಡಿದರು. ಬಸಲಿಂಗಯ್ಯ ಸ್ವಾಮಿ ಸಂಗೀತ ಮತ್ತು ಸುಭಾಷ ಚೌಡಾಪೂರ ತಬಲಾ ಸಾಥ್ ನೀಡಿದರು.