ಜಿಲ್ಲೆ

ದುಶ್ಚಟ ಬಿಡಲು ಇಂದಿನಿಂದಲೇ ಪ್ರತಿಜ್ಞೆ ಮಾಡಿ

ಕೃಷ್ಣ ಕುಲಕರ್ಣಿ

ಚಿಂಚೋಳಿ: ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಅನುಗ್ರಹ ನಿಮ್ಮೆಲ್ಲರ ಮೇಲೆ ಸದಾ ಇರುತ್ತದೆ. ದುಶ್ಚಟ ಬಿಟ್ಟು ಸನ್ಮಾರ್ಗದಲ್ಲಿ ಸಾಗುವ ಬಗ್ಗೆ ಇಂದಿನಿAದಲೇ ಪ್ರತಿಜ್ಞೆ ಮಾಡಿ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಸುಭಾಷ ರಾಠೋಡ್ ಹೇಳಿದರು.

ಚಂದಾಪುರದ ಬಂಜಾರ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಜನಜಾಗೃತಿ ವೇದಿಕೆಯಿಂದ ನಡೆಯುತ್ತಿರುವ ಮಧ್ಯ ವರ್ಜನ ಶಿಬಿರದ 7ನೇ ದಿನವಾದ ಗುರುವಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿವಿಧ ಜನಪರ ಕಾರ್ಯಕ್ರಮ ಆಯೋಜಿಸುವ ಮೂಲಕ ಹಿಂದುಳಿದ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ಶ್ರಮಿಸುತ್ತಿದೆ ಎಂದರು.

ವಿವಿಧ ಸ್ಪರ್ದೆಯಲ್ಲಿ ವಿಜೇತರಿಗೆ ಪ್ರಮಾಣಪತ್ರ ವಿತರಿಸಲಾಯಿತು. ಪ್ರಮುಖರಾದ ಮಹಿಮೂದ್ ಪಟೇಲ್, ಲಕ್ಷö್ಮಣ ಅವಂಟಿ, ಸುರೇಶ ದೇಶಪಾಂಡೆ, ನರಸಮ್ಮ ಅವಂಟಿ, ಸೈಯದ್ ಶಬ್ಬೀರ್, ಲಕ್ಷ್ಮಿದೇವಿ ಕೊರವಿ, ನರ್ಮದಾ ಗದ್ದಗೆ, ಲಕ್ಮಿ ನರನಾಳ, ಕುಮಾರ, ಸತೀಶ ಇತರರಿದ್ದರು.