ಚಿಂಚೋಳಿ: ದಿಢೀರ್ ಬೆಂಕಿ ಕಾಣಿಸಿಕೊಂಡು ವಾಹನವೊಂದು ಸಂಪೂರ್ಣ ಸುಟ್ಟು ಕರಕಲಾದ ಘಟನೆ ತಲೂಕಿನ ನರನಾಳ ಗ್ರಾಮದ ಬಳಿ ಮಂಗಳವಾರ ಸಾಯಂಕಾಲ ಜರುಗಿದೆ.
ವಾಹನದಲ್ಲಿ ಪೀರು ಡ್ರೈವರ್, ಪ್ರೇಮ್, ರವಿ , ಲಕ್ಷ್ಮಣ, ರಾಜಪ್ಪ, ರವಿತಾ ಇದ್ದರು. ಎಲ್ಲರಿಗೂ ಸಣ್ಣ-ಪುಟ್ಟ ಗಾಯಗಳಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಘಟನಾ ಸ್ಥಳಕ್ಕೆ ಚಿಂಚೋಳಿ ಪಿಎಸ್ಐ ಹಣಮಂತಪ್ಪ ಬಂಕಲಗಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.