ಚಿಂಚೋಳಿ: ತಾಲೂಕಿನ ಸುಲೇಪೇಟ ಗ್ರಾಮದ ಬಳಿ ಭಾನುವಾರ ಸಾಯಂಕಾಲ ಟಂಟಂ ಪಲ್ಟಿಯಾಗಿ ಓರ್ವ ಮೃತ ಪಟ್ಟ ಘಟನೆ ಜರುಗಿದೆ.
ನಿಡಗುಂದಾ ಗ್ರಾಮ ಪ್ರಭು ರಾಯಪ್ಪ (51) ಮೃತ ವ್ಯಕ್ತಿ. ನಿಡಗುಂದಾ ಗ್ರಾಮದಿಂದ ದಸ್ತಾಪೂರ ಗ್ರಾಮಕ್ಕೆ ಸಂಬಂಧಿಕರ ಅಂತ್ಯಕ್ರಿಯೆಗೆ 12 ಜನ ಟಂಟಂನಲ್ಲಿ ತೆರಳುತ್ತಿದ್ದರು. ಸುಲೇಪೇಟ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ತೀವ್ರ ಗಾಯಗೊಂಡಿದ್ದ ಪ್ರಭು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇನ್ನುಳಿದ 11 ಜನರಿಗೆ ಗಂಭೀರ ಗಾಯಗಳಾಗಿದ್ದು, ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಿಎಸ್ ಐ ನಂದಿನಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ nidi ಪರಿಶೀಲಿಸಿದ್ದಾರೆ. ಸುಲೇಪೇಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.