ಜಿಲ್ಲೆ

ಚಿತ್ತಾಪುರ; ಸೇವಾಲಾಲ್‌ರ ಸಿದ್ಧಾಂತ ಬದುಕಿನಲ್ಲಿ ಅಳವಡಿಸಿಕೊಳ್ಳಿ

ಕೃಷ್ಣ ಕುಲಕರ್ಣಿ

ಚಿತ್ತಾಪುರ: ಪ್ರತಿಯೊಬ್ಬರೂ ಸಂತ ಸೇವಾಲಾಲ್ ಮಹಾರಾಜರ ತತ್ವ- ಸಿದ್ಧಾಂತಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಉತ್ತಮ ಬದುಕು ನಡೆಸಬೇಕು ಎಂದು ಮುಗಳನಾಗಾವಿ ತಾಂಡಾದ ಶ್ರೀ ಜೇಮಸಿಂಗ್ ಮಹಾರಾಜರು ನುಡಿದರು.

ತುಕಾರಾಮ ಖೀರು ನಾಯಕ್ ತಾಂಡಾದಲ್ಲಿ ಶ್ರೀ ಮರಿಯಮ್ಮ ದೇವಿ ಹಾಗೂ ಸಂತ ಸೇವಾಲಾಲï ಮಹಾರಾಜರ ದೇವಸ್ಥಾನ ನಿರ್ಮಾಣಕ್ಕೆ ಸೋಮವಾರ ಅಡಿಗಲ್ಲು ನೆರವೇರಿಸಿ ಮಾತನಾಡಿ, ತಾಂಡಾದಲ್ಲಿ ಸಂತ ಸೇವಾಲಾಲ್ ಹಾಗೂ ಮರಿಯಮ್ಮ ದೇವಿ ದೇವಸ್ಥಾನ ನಿರ್ಮಾಣ ಮಾಡುವ ಮೂಲಕ ಜನರಲ್ಲಿ ಧಾರ್ಮಿಕ ಭಾವನೆ ಬಿತ್ತಿ, ಒಗ್ಗಟ್ಟು ಕಾಪಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಚೌಡಾಪುರದ ಶ್ರೀ ಮುರಾರಿ ಮಹಾರಾಜ, ಕೇಸರಟಗಿಯ ಮಾತಾ ಲತಾ ದೇವಿ, ಸೌದಾಗರ ತಾಂಡಾದ ಶ್ರೀ ಚಂದ್ರಾಮ ಮಹಾರಾಜ, ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು, ತರಿತಾಂಡಾದ ಶ್ರೀ ಅನಿಲï ಸಾಹೇಬ್, ಶ್ರೀ ಪ್ರತಾಪ ಮಹಾರಾಜ, ಶ್ರೀ ಕಮಲ ಮಹಾರಾಜ ಸಾನ್ನಿಧ್ಯ ವಹಿಸಿದ್ದರು.

ಭೂದಾನಿ ಅಂತಯ್ಯ ಮುತ್ತೇದಾರ್, ಪ್ರಮುಖರಾದ ತುಕಾರಾಮ ನಾಯಕ್, ಗೋಪಾಲ್ ರಾಠೋಡ್, ಸಂತೋಷ ಚೌದರಿ, ಸುರೇಶ್ ಚವ್ಹಾಣ್, ನಾಗೇಂದ್ರ ರಾಠೋಡ್, ಲಕ್ಷö್ಮಣ ಚವ್ಹಾಣ್, ವಿಕಾಸ್ ಪವಾರ್, ಅಶ್ವತ್ಥ ರಾಠೋಡ್, ಅಂಬಾದಾಸ್ ಚವ್ಹಾಣ್, ರಮೇಶ ಜಾಧವ್, ಗೋಪಿ ಕಾರಬಾರಿ, ನೀಲು ಚವ್ಹಾಣ್, ವಿಜಯ ರಾಠೋಡ್, ಸೀತಾರಾಮ ಪವಾರ್, ಚಂದ್ರು ನಾಯಕ್, ಶಿವರಾಮ ಚವ್ಹಾಣ್, ಪೋಮು ನಾಯಕ್, ತಾರಾನಾಥ ನಾಯಕ್, ರಾಮು ನಾಯಕ್, ಕಿಶನ್, ಅಶೋಕ ಪೂಜಾರಿ, ಬೋಜು ಪವಾರ್, ತುಳಜಾರಾಮ ರಾಠೋಡ್, ಪಾಂಡು ಯರಗಲ್ ಇತರರಿದ್ದರು.