ಜಿಲ್ಲೆ

ಆಳಂದ; ಬಿಸಿಯೂಟ ಯೋಜನೆಯ ಎಣ್ಣೆ ಕದ್ದೊಯ್ದ ಕಳ್ಳರು!

ಆಳಂದ: ಬಿಸಿಯೂಟ ಯೋಜನೆಯಡಿ ವಿದ್ಯಾರ್ಥಿಗಳಿಗೆ ಅಡುಗೆ ಮಾಡುವುದಕ್ಕಾಗಿ ತಂದಿದ್ದ ಎಣ್ಣೆ ಪಾಕೆಟ್​ಗಳನ್ನು ಕಳ್ಳತನ ಮಾಡಿದ ಪ್ರಕರಣ ತಾಲೂಕಿನ ಸುಲ್ತಾನಪುರ ಗಲ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆದಿದೆ.

ಶನಿವಾರ ಶಾಲೆ ಮುಗಿಸಿ ಎಲ್ಲ ಕೋಣೆಗಳ ಬೀಗಿ ಹಾಕಲಾಗಿದೆ. ಭಾನುವಾರ ರಜೆ ಇರುವುದರಿಂದ ಯಾರೊಬ್ಬರೂ ಶಾಲೆಯತ್ತ ಬಂದಿರಲಿಲ್ಲ. ಸೋಮವಾರ ಬೆಳಗ್ಗೆ ಶಾಲೆಗೆ ಹೋಗಿ ನೋಡಿದಾಗ ಕಳ್ಳತನ ಆಗಿರುವುದು ಕಂಡುಬಂದಿದೆ. ಬಿಸಿಯೂಟಕ್ಕಾಗಿ ಇಟ್ಟಿದ್ದ 25 ಲೀ., ಒಂದು ಸೌಂಡ್​ ಬಾಕ್ಸ್​, 20 ಪ್ಲಾಸ್ಟಿಕ್​ ಕುರ್ಚಿ ಸೇರಿ ಇನ್ನಿತರ ವಸ್ತುಗಳನ್ನು ಕಳ್ಳತನ ಮಾಡಲಾಗಿದೆ.

ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು, ಬೆರಳಚ್ಚುಗಾರರು, ಶ್ವಾನದಳ ಸ್ಥಳಕ್ಕೆ ಭೇಟಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮುಖ್ಯಗುರುಗಳ ಹೇಳಿಕೆ ಮೇರೆಗೆ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.