ಆಳಂದ: ದೇಶ ಕಾಯಲು ಯೋಧರು ಎಷ್ಟು ಮುಖ್ಯವೋ, ಇಡೀ ಜಗತ್ತಿಗೆ ಬೆಳಕು ನೀಡುವಲ್ಲಿ ವಿದ್ಯುತ್ ನೌಕರರ ಪಾತ್ರ ಪ್ರಮುಖವಾಗಿದೆ ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ ಉಪಾಧ್ಯಕ್ಷ ಬಾಬು ಕೋರೆ ಹೇಳಿದರು.
ಪಡಸಾವಳಿ ಗ್ರಾಮದ ಅಂಭಾ ಭವಾನಿ ಮಂದಿರದಲ್ಲಿ ಗ್ರಾಮಸ್ಥರಿಂದ ಗುರುವಾರ ಹಮ್ಮಿಕೊಂಡಿದ್ದ ಸನ್ಮಾನ ಹಾಗೂ ಅಭಿನಂದನೆ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿ, ಯುವಕರು ಸಾಕಷ್ಟು ಪ್ರಜ್ಞಾವಂತರಾಗಿದ್ದಾರೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಜತೆಗೆ ಉತ್ತಮ ಸಂಸ್ಕಾರ ನೀಡಿ. ಅಂದಾಗಲೇ ಶ್ರೇಷ್ಠ ಬದುಕು ನಡೆಸಲು ಸಾಧ್ಯ. ಗ್ರಾಮದ ಅಭಿವೃದ್ಧಿಗೆ ನನ್ನಿಂದಾಗುಷ್ಟು ಸಹಕಾರ ನೀಡುವೆ ಎಂದರು.
ಕೇAದ್ರ ಕಾರ್ಯಕಾರಣಿ ಸಮಿತಿ ಸದಸ್ಯ ಗಣಪತಿ ಮರಪಳ್ಳಿ ಮಾತನಾಡಿ, ಕೋರೆ ಅವರು ಹುಟ್ಟು ಹೋರಾಟಗಾರರಾಗಿದ್ದು, ಕಷ್ಟದಲ್ಲಿರುವ ಸಾಕಷ್ಟು ನೌಕರರಿಗೆ ನೆರವಾಗಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಹುದ್ದೆ ಅಲಕಂರಿಸಲು ಎಂದು ಹಾರೈಸಿದರು.
ಸಮಿತಿ ಸದಸ್ಯ ಬಾಬಾಗೌಡ ಪಾಟೀಲ್, ವಿನೋದ ಸಿಂಗ್, ದೇವಿದಾಸ ರೆಡ್ಡಿ ಮಾತನಾಡಿದರು. ಪ್ರಮುಖರಾದ ಸೋವiನಾಥ ಪಾಟೀಲ್, ಕೈಲಾಸ ಬಿರಾದಾರ, ಭೋಜರಾಜ ನಿಂಬರ್ಗಿ, ಲಕ್ಷ್ಮೀಪುತ್ರ ಪಾಟೀಲ್, ಶ್ರೀಪಾದ ಭೋಗಾರ, ದಸ್ತಗಿರ ಗುಂಜೋಟಿ, ದೋಂಡಪ್ಪ ಗುಡೂರೆ, ವಿದ್ಯಾದರ ಶೇರಿಕರ ಇತರರಿದ್ದರು.