ಜಿಲ್ಲೆ

ಶಿಶಿಕ್ಷು ತರಬೇತಿದಾರರ ಆಯ್ಕೆ ಮೌಖಿಕ ಸಂದರ್ಶನ ೨೧ರಂದು

ಕಲಬುರಗಿ : ಪೂರ್ಣಾವಧಿ ಶಿಶಿಕ್ಷು ತರಬೇತಿಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕಲಬುರಗಿ ವಿಭಾಗ-೨ರಲ್ಲಿ ಲಭ್ಯವಿರುವ ೨೫ ಸ್ಥಾನಗಳಿಗೆ ತರಬೇತಿದಾರರನ್ನು ಆಯ್ಕೆ ಮಾಡಲು ಆಟೋ ಎಲೆಕ್ಟಿçಶಿಯನ್, ಡಿಸೇಲ್ ಮೆಕ್ಯಾನಿಕ್, ಫಿಟ್ಟರ್ ವೃತ್ತಿಯಲ್ಲಿ ಐಟಿಐ ಪಾಸಾಗಿರುವ ಅಭ್ಯರ್ಥಿಗಳಿಗೆ ಮಾತ್ರ ನ.೨೧ರಂದು ಬೆಳಗ್ಗೆ ೧೧ ರಿಂದ ಸಂಜೆ ೫ರವರೆಗೆ ಕಲಬುರಗಿಯ ಕೇಂದ್ರ ಬಸ್ ನಿಲ್ದಾಣದ ಮೊದಲ ಮಹಡಿಯಲ್ಲಿರುವ ನಿಗಮದ ಕಲಬುರಗಿ ವಿಭಾಗ-೨ರ ಕಚೇರಿಯಲ್ಲಿ ಮೌಖಿಕ ಸಂದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

ಶಿಶಿಕ್ಷು ತರಬೇತಿದಾರರಿಗೆ ಅದೇ ವೃತ್ತಿಯಲ್ಲಿ ಐಟಿಐ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಲ್ಲಿ ತರಬೇತಿಯಲ್ಲಿ ರಿಯಾಯಿತಿ ನೀಡಲಾಗುವುದು. ಆಯ್ಕೆ ಪ್ರಾಧಿಕಾರದ ತೀರ್ಮಾನವೇ ಅಂತಿಮ.ಅರ್ಹ ಅಭ್ಯರ್ಥಿಗಳು ಮೂಲ ದಾಖಲಾತಿಗಳೊಂದಿಗೆ ಆಧಾರ್ ಕಾರ್ಡ್ ಮತ್ತು ಕಡ್ಡಾಯವಾಗಿ ಇ-ಮೇಲ್ ವಿಳಾಸದೊಂದಿಗೆ ಎರಡು ಸೆಟ್ ಝೆರಾಕ್ಸ್ ಪ್ರತಿ ಮತು ಇತ್ತೀಚಿನ ಎರಡು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ನಿಗದಿತ ದಿನದಂದು ನಡೆಯುವ ಮೌಖಿಕ ಸಂದರ್ಶನಕ್ಕೆ ಹಾಜರಾಗಬೇಕು.

ಮಾಹಿತಿಗಾಗಿ ನಿಗಮದ ಕಲಬುರಗಿ ವಿಭಾಗ-೨ಕ್ಕೆ ಕಚೇರಿಯನ್ನು ಖುದ್ದಾಗಿ ಹಾಜರಾಗಬಹುದು.ಮೊಬೈಲ್ ಸಂಖ್ಯೆ ೯೭೩೧೭೮೧೦೬೧, ೮೦೭೩೪೭೯೩೫೮, ೬೩೬೦೯೨೩೧೦೦, ೯೭೩೯೪೮೦೪೫೭, ೭೭೬೦೯೯೮೭೫೦ ಕ್ಕೆ ಸಂಪರ್ಕಿಸಿ ಅಥವಾ ಕಚೇರಿ ದೂರವಾಣಿ ಸಂಖ್ಯೆ ೦೮೪೭೨-೨೬೨೯೩೩ಗೆ ಸಂಪರ್ಕಿಸಬಹುದಾಗಿದೆ.