ಜಿಲ್ಲೆ

ಕೆಕೆಆರ್‌ಡಿಬಿ ಅನುದಾನ ಸರ್ಕಾರ ನೀಡುತ್ತಿಲ್ಲ

Kopala - Desk - Eraveni

ಹೂವಿನಹಡಗಲಿ: ನಂಜುಂಡಪ್ಪ ವರದಿಯಂತೆ ಕಲ್ಯಾಣ ಕರ್ನಾಟಕ ಭಾಗದ ಹಿಂದುಳಿದ ತಾಲೂಕುಗಳಿಗೆ ನೀಡಬೇಕಿದ್ದ ಅನುದಾನ ನೀಡದೇ ಕಾಂಗ್ರೆಸ್ ಶಾಸಕರಿಗೆ ನೀಡಲಾಗುತ್ತಿದ್ದು, ಇದರ ವಿರುದ್ಧ ಕಲ್ಯಾಣ ಕರ್ನಾಟಕ ಭಾಗದ ಬಿಜೆಪಿ ಶಾಸಕರು ರಾಜ್ಯಪಾಲರಗೆ ದೂರು ಸಲ್ಲಿಸುವ ಮೂಲಕ ಕಾನೂನು ಹೋರಾಟ ಮಾಡುತ್ತೇವೆ ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.

ಪಟ್ಟಣದ ಶಾಸಕರ ಭವನದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಸರ್ಕಾರ ಒತ್ತು ನೀಡುತ್ತಿಲ್ಲ. 375 ಕೋಟಿ ರೂ. ಅನುದಾನ ಕೇವಲ ಕಾಂಗ್ರೆಸ್ ಶಾಸಕರಿಗೆ ನೀಡಲಾಗುತ್ತಿದೆ. ಬಳಕೆಯಾಗದೆ ಉಳಿದ ಸುಮಾರು 5000 ಕೋಟಿ ರೂ. ಅನುದಾನದ ಬಡ್ಡಿ ಸಹ ಸಚಿವರು ಕ್ಷೇತ್ರಗಳಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಆ ಹಣವನ್ನು ಕಲ್ಯಾಣ ಕರ್ನಾಟಕ ಭಾಗಕ್ಕೆ ಮೀಸಲಿಡಬೇಕು. ಅದನ್ನು ತಮ್ಮ ವಿವೇಚಾ ನಿಧಿ ಎಂಬಂತೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹಿಂದುಳಿದ ತಾಲೂಕುಗಳಿಗೆ ಸುಮಾರು 1470 ಕೋಟಿ ರೂ. ಅನುದಾನ ಒದಗಿಸಲಿ. ಆದರೆ, ಸರ್ಕಾರ ಬಿಜೆಪಿ ಶಾಸಕರನ್ನು ಗುರುತಿಸಿ ಅನುದಾನ ನೀಡುತ್ತಿಲ್ಲ. ಕಾಂಗ್ರೆಸ್ ಕ್ಷೇತ್ರಗಳು ಹಾಗೂ ಅಲ್ಲಿಯ ಶಾಸಕರಿಗೆ ಅನುದಾನ ಬಳಕೆ ಮಾಡಿಕೊಳ್ಳುವಂತೆ ಸೂಚಿಸುತ್ತಿದ್ದಾರೆ. ಈ ಕುರಿತು ಸದನದಲ್ಲಿ ಚರ್ಚಿಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಬಳಿಕ ಕಾನೂನು ಹೋರಾಟ ನಡೆಸುತ್ತೇವೆ ಎಂದರು.