ಕಿಕ್ಕೇರಿ : ತಾಲೂಕಿನ ಪ್ರತಿಷ್ಠಿತ ಕಿಕ್ಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕೆ.ಆರ್. ಕೃಷ್ಣ ಸೋಮವಾರ ಅವಿರೋಧ ಆಯ್ಕೆಯಾದರು. ಈ ಹಿಂದೆ ಅಧ್ಯಕ್ಷರಾಗಿದ್ದ ಕೆ.ಜಿ. ಪುಟ್ಟರಾಜು ಒಡಂಬಡಿಕೆ ಸೂತ್ರದಂತೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆಗೆ ಸಿದ್ಧತೆ ನಡೆಸಲಾಗಿತ್ತು. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಬೆಂಬಲಿತ ಸದಸ್ಯ ಕೆ.ಆರ್. ಕೃಷ್ಣ ಹೊರತು ಪಡಿಸಿ ಯಾರೂ ಉಮೇದುವಾರಿಕೆ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆ ಘೋಷಣೆ ಮಾಡಲಾಯಿತು. ಒಟ್ಟು 16ಸದಸ್ಯರು ಇರುವ ಗ್ರಾಪಂ.ನಲ್ಲಿ ಕಾಂಗ್ರೆಸ್ ಬೆಂಬಲಿತ 5ಸದಸ್ಯರು ಗೈರಾಗಿದ್ದರು. ಚುನಾವಣಾಧಿಕಾರಿಯಾಗಿ ಸಿಡಿಪಿಒ ಅರುಣ್‌ಕುಮಾರ್, ಸಹ ಚುನಾವಣಾಧಿಕಾರಿಯಾಗಿ ಸುನಿಲ್‌ಬಾಬು, ಪಿಡಿಒ ಚಲುವರಾಜ್ ಕಾರ್ಯ ನಿರ್ವಹಿಸಿದರು.
ನೂತನ ಅಧ್ಯಕ್ಷ ಕೆ.ಆರ್ ಕೃಷ್ಣ ನಂತರ ಮಾತನಾಡಿ, ಗ್ರಾಮಗಳಿಗೆ ಮೂಲ ಸೌಕರ್ಯ ಒದಗಿಸಲು ಕ್ರಮ ವಹಿಸುವೆ ಎಂದರು. ಅಭಿಮಾನಿಗಳು ಹೂಮಾಲೆ ಹಾಕಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಗ್ರಾಪಂ. ಉಪಾಧ್ಯಕ್ಷೆ ಸಿ.ಎಲ್. ಜ್ಯೋತಿ, ಸದಸ್ಯರಾದ ಕೆ.ಜಿ. ಪುಟ್ಟರಾಜು, ಕೆ.ಆರ್. ರಾಜೇಶ್, ಎಸ್.ಕೆ. ಬಾಲಕೃಷ್ಣ, ಕೆ.ಬಿ. ಚಂದ್ರ ಶೇಖರ್, ಬಿ. ತಾಯಮ್ಮ, ಸಿ.ಬಿ. ಸರಸ್ವತಿ, ಭಾರತಿ, ಎಂ.ವಿ. ರೇಣುಕಮ್ಮ, ಪದ್ಮಾವತಿ ಮತ್ತಿತರರಿದ್ದರು.