ಜಿಲ್ಲೆ

ಪ್ರತಿ ಗ್ರಾಮದಲ್ಲೂ ಸಾಕ್ಷರತೆ ನೆಲೆಸಲಿ

ಎ. ಆರ್. ರಘುರಾಮ

ಕಿಕ್ಕೇರಿ : ಪ್ರತಿ ಗ್ರಾಮದಲ್ಲೂ ಸಾಕ್ಷರತೆ ನೆಲೆಸಲಿ ಎಂದು ಶಾಸಕ ಎಚ್.ಟಿ. ಮಂಜು ಹೇಳಿದರು. ಹೋಬಳಿಯ ಅಂಕನಹಳ್ಳಿ ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ ಗುರುವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.20 ಲಕ್ಷ ರೂ. ವೆಚ್ಚದಲ್ಲಿ ನರೇಗಾ ಹಾಗೂ ಇಲಾಖೆ ಅನುದಾನದಲ್ಲಿ ಕಟ್ಟಡ ನಿರ್ಮಾಣ ಆರಂಭವಾಗಿದೆ. ಸರ್ಕಾರದ ಅನುದಾನಕ್ಕೆ ಕಾಯದೇ ಸದ್ಯ ಇರುವ ಸಂಪನ್ಮೂಲ ಹಾಗೂ ಸ್ಥಳೀಯ ಅನುದಾನಗಳನ್ನು ಬಳಸಿಕೊಳ್ಳಬೇಕು. ಉತ್ತಮ ಕೆಲಸಗಳನ್ನು ತಮ್ಮ ಅವಧಿಯಲ್ಲಿ ಮಾಡಿ ಜನರ ಸೇವೆ ಮಾಡಬೇಕು ಎಂದರು.

ಸರ್ಕಾರಿ ಶಾಲೆಗೆ ಬೆಂಬಲಿಸಿ:ರಾಜ್ಯ ಸಹಕಾರ ಮಾರಾಟ ಮಹಾಮಂಡಲ ನಿರ್ದೇಶಕ ಚೋಳೇನಹಳ್ಳಿ ಸಿ.ಎನ್. ಪುಟ್ಟಸ್ವಾಮಿಗೌಡ ಮಾತನಾಡಿ, ಅಂಗನವಾಡಿ ಕೇಂದ್ರ ಮತ್ತು ಶಾಲೆಗಳು ದೇಗುಲಕ್ಕೆ ಸಮಾನ ಎಂದರು. ಅಂಗನವಾಡಿ ಕೇಂದ್ರ ಕಟ್ಟಡದ ನಿರ್ಮಾಣ ಕಾಮಗಾರಿ ಉಸ್ತುವಾರಿಯನ್ನು ಗ್ರಾಮಸ್ಥರೇ ನಿರ್ವಹಿಸಬೇಕು. ಗುಣಮಟ್ಟ ಕಾಪಾಡಿಕೊಳ್ಳಲು ಗಮನ ಹರಿಸಬೇಕು. ಖಾಸಗಿ ಶಾಲೆ ವ್ಯಾಮೋಹ ಬಿಟ್ಟು ಮಕ್ಕಳನ್ನು ಸರ್ಕಾರಿ ಶಾಲೆ,ಅಂಗನವಾಡಿ ಕೇಂದ್ರಗಳಿಗೆ ದಾಖಲಿಸಬೇಕು ಎಂದರು. ಸನ್ಮಾನ: ಅಂಗನವಾಡಿ ಕೇಂದ್ರಕ್ಕೆ ಭೂದಾನ ಮಾಡಿದ ಗ್ರಾಮದ ಪಟೇಲ್ ಈರೇಗೌಡರನ್ನು ಸನ್ಮಾನಿಸಲಾಯಿತು.

ಸುಬ್ರಹ್ಮಣ್ಯ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಎಂ. ಕಿರಣ್, ಐಕನಹಳ್ಳಿ ಗ್ರಾಪಂ. ಅಧ್ಯಕ್ಷೆ ಸುಧಾ, ಕಿಕ್ಕೇರಿ ಕೆಪಿಎಸ್ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣೇಗೌಡ, ತಾಪಂ ಇಒ ಸುಷ್ಮಾ, ಸಿಡಿಪಿಒ ಅರುಣಕುಮಾರ್, ಪಿಡಿಒ ವಿಜಯ್, ಗ್ರಾ.ಪಂ. ಉಪಾಧ್ಯಕ್ಷ ಪ್ರಸನ್ನ, ಸದಸ್ಯರಾದ ಎ.ಎಸ್. ಮಂಜೇಗೌಡ, ಕೆ.ಎನ್. ಕುಮಾರ್, ಶಂಕರ್, ಈ. ರಾಜು, ಅಶೋಕನಾಯಕ್, ಅಂಬುಜಾ, ನಂಜುಂಡೇಗೌಡ, ಐ.ಆರ್. ಸುಮಿತ್ರಾ, ಭಾಗ್ಯಮ್ಮ ಆಶೋಕ ಮತ್ತಿತರರು ಇದ್ದರು.