ಜಿಲ್ಲೆ

ಕಿಕ್ಕೇರಿ ಗ್ರಾಪಂ ಅಧ್ಯಕ್ಷರಾಗಿ ಕೆ.ಜಿ. ಪುಟ್ಟರಾಜು ಆಯ್ಕೆ

ಎ. ಆರ್. ರಘುರಾಮ

ಕಿಕ್ಕೇರಿ : ಕಿಕ್ಕೇರಿ ಗ್ರಾಪಂ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸದಸ್ಯ ಕೆ.ಜಿ. ಪುಟ್ಟರಾಜು ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರು.
ಎರಡನೆ ಸುತ್ತಿನ ಗ್ರಾಪಂ ಅಧ್ಯಕ್ಷರ ಅಧಿಕಾರಕ್ಕೆ ಬಿಜೆಪಿ ಹಾಗೂ ಜೆಡಿಎಸ್ ಬೆಂಬಲಿತ ಸದಸ್ಯರು ಒಡಂಬಡಿಕೆ ಮಾಡಿಕೊಂಡಿದ್ದರು. ಒಡಂಬಡಿಕೆ ಸೂತ್ರದಂತೆ ಎಸ್.ಕೆ. ಬಾಲಕೃಷ್ಣ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ತೆರವಾಗಿದ್ದ ಸ್ಥಾನಕ್ಕೆ ಕೆ.ಆರ್. ಪುಟ್ಟರಾಜು ಹೊರತುಪಡಿಸಿ ಬೇರೆ ಯಾವ ಸದಸ್ಯರೂ ಉಮೇದುವಾರಿಕೆ ಸಲ್ಲಿಸದ ಕಾರಣ ಚುನಾವಣಾ ಅಧಿಕಾರಿಗಳು ಅವಿರೋಧ ಆಯ್ಕೆ ಘೋಷಣೆ ಮಾಡಿದರು. ಒಟ್ಟು 16 ಸದಸ್ಯರು ಇರುವ ಗ್ರಾಪಂನಲ್ಲಿ 6 ಸದಸ್ಯರು ಗೈರಾಗಿದ್ದರು.
ಚುನಾವಣಾಧಿಕಾರಿ ಅರುಣ್‌ಕುಮಾರ್, ಸಹ ಚುನಾವಣಾಧಿಕಾರಿ ಸುನಿಲ್‌ಬಾಬು, ಪಿಡಿಒ ಚಲುವರಾಜು, ಗ್ರಾಪಂ. ಉಪಾಧ್ಯಕ್ಷೆ ಜ್ಯೋತಿ, ಸದಸ್ಯರಾದ ಎಸ್.ಕೆ. ಬಾಲಕೃಷ್ಣ, ಕೆ.ಆರ್. ರಾಜೇಶ್, ಕೆ.ಬಿ. ಚಂದ್ರಶೇಖರ್, ಕೆ.ಆರ್. ಕೃಷ್ಣ, ರೇಣುಕಾ ಅನಂತ, ಭಾರತಿ, ಸರಸ್ವತಿ ಗೋವಿಂದರಾಜು ಇತರರು ಹಾಜರಿದ್ದರು.