ಜಿಲ್ಲೆ

ಜಕ್ಕೆರಮಡುನಲ್ಲಿ ಉಚ್ಛಾಯ ಮಹೋತ್ಸವ

ಮುದಗಲ್: ಜಕ್ಕೆರಮಡು ಗ್ರಾಮದ ಆರಾಧ್ಯ ದೈವ ಶ್ರೀ ಕರಿಯಪ್ಪ ತಾತ ಜಾತ್ರೆ ಸೋಮವಾರ ಅದ್ದೂರಿಯಾಗಿ ನಡೆಯಿತು. ಬೆಳಗ್ಗೆ ದೇವಸ್ಥಾನದ ಕಳಶವನ್ನು ವಾದ್ಯ ಮೇಳದೊಂದಿಗೆ ಮೆರವಣಿಗೆಯಲ್ಲಿ ತಂದು ಕಳಸಾರೋಹಣ ಮಾಡಲಾಯಿತು. ನಂತರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಂಜೆ ಉಚ್ಛಾಯ ಎಳೆಯಲಾಯಿತು. ಕನ್ನಾಳ ಗ್ರಾಪಂ ಮಾಜಿ ಅಧ್ಯಕ್ಷ ತಿಪ್ಪಣ್ಣ ರಾಠೋಡ್, ಎಪಿಎಂಸಿ ಮಾಜಿ ಅಧ್ಯಕ್ಷ ಮಲ್ಲರೆಡ್ಡಪ್ಪ, ಪ್ರಮುಖರಾದ ಧನಸಿಂಗಪ್ಪ ಪೂಜಾರಿ, ಶಿವಪ್ಪ ಪೂಜಾರಿ, ದೌಲಸಾಬ್, ಅಮರೇಶ, ಗದ್ದೆಪ್ಪ ಹಡಪದ, ಮಾನಪ್ಪ, ಹನುಮಂತಪ್ಪ, ರಾಮಣ್ಣ, ಹರಿಶ್ಚಂದ್ರ ವಕೀಲ, ಆನಂದ ವಕೀಲ, ಸೋಮಲೇಪ್ಪ, ಅಮರೇಶ, ಮೌನೇಶ ಇತರರಿದ್ದರು.